ಗುಜರಾತ್ ವಿಧಾನಸಭಾ ಚುನಾವಣೆ: 1274 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ

0
381

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ 1274 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಈ ಮತಗಟ್ಟೆಗಳ ಅಧ್ಯಕ್ಷರ ಸಹಿತ ಚುನಾವಣಾ ಅಧಿಕಾರಿಗಳು ಮತ್ತು ಸುರಕ್ಷಾ ಸಿಬ್ಬಂದಿಗಳು ಕೂಡ ಮಹಿಳೆಯರೇ ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಗುಜರಾತ್ ನಲ್ಲಿ ಚುನಾವಣೆಗಾಗಿ ಒಟ್ಟು 51,782 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 182 ಮತಗಟ್ಟೆಗಳಲ್ಲಿ ವಿಶಿಷ್ಟಚೇತನರ ಸಹಾಯಕ್ಕಾಗಿ ವಿಶೇಷ ವೀಕ್ಷಕರನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

182 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಚುನಾವಣೆ ಡಿಸೆಂಬರ್ 1ರಂದು ಮತ್ತು ಎರಡನೇ ಹಂತದ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಹಾಗೂ ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 92 ಸಂಪೂರ್ಣ ಬಹುಮತವಾಗಿದ್ದು, ರಾಜ್ಯದಲ್ಲಿ 4.9 ಕೋಟಿ ಮತದಾರರಿದ್ದಾರೆ.

ನವೆಂಬರ್ 5ರಂದು ಮೊದಲ ಹಂತದ ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನವೆಂಬರ್ 10ರಂದು ಎರಡನೇ ಹಂತ. ಮೊದಲ ಹಂತದ ನಾಮಪತ್ರಗಳನ್ನು ನವೆಂಬರ್ 14ರಂದು ಮತ್ತು ಎರಡನೇ ಹಂತಕ್ಕೆ ನವೆಂಬರ್ 18ರಂದು ನಾಮಪತ್ರ ಸಲ್ಲಿಸಬಹುದು. ನವೆಂಬರ್ 15 ಮತ್ತು 18ರಂದು ಪರಿಶೀಲನೆ ನಡೆಯಲಿದೆ. ನವೆಂಬರ್ 17 ಮತ್ತು 21ರಂದು ಪತ್ರಗಳನ್ನು ಹಿಂಪಡೆಯಬಹುದು.