ಯುಎಇಯಲ್ಲಿ ಈ ಸಲವೂ ಯೋಗಕ್ಕೊಂದು ದಿನ

0
687

ದುಬೈ,ಮೇ 30: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಗಳು ಈ ವರ್ಷವೂ ಯುಎಇಯಲ್ಲಿ ವ್ಯಾಪಕವಾಗಿ ನಡೆಯಲಿದ್ದು ಭಾರತದ ಕಾನ್ಸುಲ್ ಜನರಲ್ ವಿಪುಲ್ ದುಬೆ ಸಿದ್ಧತೆ ನಡೆಸುವ ಸಲುವಾಗಿ ದುಬೈ ಸ್ಪೋಟ್ರ್ಸ್ ಕೌನ್ಸಿಲ್ ಅಧಿಕಾರಿಗಳನ್ನು ಭೇಟಿಯಾದರು. ಜೂನ್ ಇಪ್ಪತ್ತೊಂದಕ್ಕೆ ದುಬೈ ಸಬೀಲ್ ಪಾರ್ಕಿನಲ್ಲಿ ಅತೀ ದೊಡ್ಡ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

ಈ ಸಲ ಸರಕಾರಿ ಸಂಸ್ಥೆಗಳನ್ನು ಆಮಂತ್ರಿಸಲು ನಿರ್ಧರಿಸಲಾಗಿದ್ದು ಅಪಾರ ಜನಸಂಖ್ಯೆ ಪ್ರತಿ ವರ್ಷವೂ ಯೋಗ ದಿನಾಚರಣೆಯಲ್ಲಿ ಸ್ಫೂರ್ತಿಯಿಂದ ಭಾಗವಹಿಸುತ್ತಿದ್ದಾರೆ ಎಂದು ದುಬೈ ಸ್ಪೋರ್ಟ್ಸ್ ಪ್ರಧಾನ ಕಾರ್ಯದರ್ಶಿ ಸಯೀದ್ ಹರೀಬ್, ನಾಸರ್ ಅಮಾನ್ ಅಲ್‍ ರಹ್ಮಾ ಹೇಳಿದರು. ಯೋಗಕ್ಕೆ ಸರ್ವ ಬೆಂಬಲ ನೀಡಿದ ಮೊದಲ ವಿಶ್ವದ ನಗರ ದುಬೈಯಾಗಿದೆ. 2015ರಲ್ಲಿ ಮೊದಲ ಬಾರಿ ನಡೆದ ಯೋಗದಿನ ಕಾರ್ಯಕ್ರಮದಲ್ಲಿ 13000 ಮಂದಿ ಭಾಗವಹಿಸಿದ್ದರು. ಕಳೆದ ವರ್ಷ 20000 ಮಂದಿ ಭಾಗವಹಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ ವೇದಿಕೆ, ಶಿಕ್ಷಣಾಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ಕಾರ್ಯಕ್ರಮ ನಡೆಯುತ್ತಾ ಬಂದಿವೆ.