ಗುರುಗ್ರಾಮದಲ್ಲಿ ಟೋಲ್ ಬೂತ್ ಮಹಿಳಾ ಸಿಬ್ಬಂದಿಗೆ ಕಾರು ಚಾಲಕನ ಹಲ್ಲೆ: ವೀಡಿಯೊ

0
534

ಹೊಸದಿಲ್ಲಿ, ಜೂ. 21: ಗುರುಗ್ರಾಮದಲ್ಲಿ ಟೋಲ್ ಕೇಳಿದ್ದಕ್ಕಾಗಿ ಮಹಿಳಾ ಸಿಬ್ಬಂದಿಗೆ ಕಾರು ಚಾಲಕ ಹಲ್ಲೆ ನಡೆಸಿದ್ದಾನೆ. ಟೋಲ್ ಕೊಡುವುದಿಲ್ಲ ಎಂದು ಚಾಲಕ ಮಹಿಳಾ ಸಿಬ್ಬಂದಿಗೆ ಹೊಡೆಯುತ್ತಿರುವ ಸಿಸಿಟಿವಿ ದೃಶ್ಯಗಳು ಹೊರಬಂದಿವೆ. ಕೆರ್ಕಿ ಡೌನ್‍ ಲ ಟೋಲ್‍ಫ್ಲಾಝದಲ್ಲಿ ಘಟನೆ ನಡೆದಿದ್ದು ಟೋಲ್ ಬೂತ್‍ನ ಕಿಟಕಿಯಲ್ಲಿ ಚಾಲಕ ಮಹಿಳೆಯ ಮುಖಕ್ಕೆ ಹೊಡೆದಿದ್ದಾನೆ. ಕೂಡಲೇ ಅಲ್ಲಿದ್ದ ಇತರ ಸಿಬ್ಬಂದಿಗಳು ಆತನನ್ನು ದೂರ ಸರಿಸಿದರು.

ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಚಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗುರುಗ್ರಾಮದ ಟೋಲ್‍ಫ್ಲಾಝದಲ್ಲಿ ಈ ಹಿಂದೆಯೂ ಇಂತಹದೇ ಘಟನೆಗಳು ನಡೆದಿವೆ. ಅಂದು ಕರ್ತವ್ಯದಲ್ಲಿದ್ದ ವ್ಯಕ್ತಿಗೆ ಕಾರು ಢಿಕ್ಕಿ ಹೊಡೆದು ಗಾಯಗೊಳಿಸುವ ಯತ್ನ ನಡೆದಿತ್ತು.