ಬೇಕೆಂದೇ ಕೋವಿಡ್ ಸೋಂಕು ತಗುಲಿಸಿಕೊಂಡಿದ್ದ ಝೆಕ್ ರಿಪಬ್ಲಿಕ್ ನ ಜಾನಪದ ಗಾಯಕಿ ಹನಾ ಹೊರ್ಕಾ ನಿಧನ

0
201

ಸನ್ಮಾರ್ಗ ವಾರ್ತೆ

ಝೆಕ್ ರಿಪಬ್ಲಿಕ್: ಕೊರೋನಾ ಲಸಿಕೆ ಪಡೆಯದ ನನಗೆ ಕೊವಿಡ್ ಸೋಂಕು ತಗುಲಿದೆ. ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಝೆಕ್ ರಿಪಬ್ಲಿಕ್ ದೇಶದ ಖ್ಯಾತ ಜಾನಪದ ಗಾಯಕಿ ಹನ ಹೊರ್ಕಾ ನಿಧನರಾಗಿದ್ದಾರೆ.

ತನ್ನ ತಾಯಿ ನಿಧನರಾದ ಸುದ್ದಿಯ ಕುರಿತು ಪ್ರತಿಕ್ರಿಯಿಸಿರುವ ಹನ ಹೊರ್ಕಾರ ಮಗ, ‘ನನಗೆ ಮತ್ತು ನನ್ನ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಕೆಲ ಸ್ಥಳಗಳಿಗೆ ಪ್ರವೇಶಿಸಲು ಚೇತರಿಕೆ ಪಾಸ್ ಸಿಗುತ್ತದೆ ಎನ್ನುವ ಕಾರಣಕ್ಕೆ ನನ್ನ ತಾಯಿ ಬೇಕೆಂದೇ ಸೋಂಕು ತಗುಲಿಸಿಕೊಂಡರು’ ಎಂದು ಹೇಳಿದ್ದಾರೆ.

ಝೆಕ್ ಗಣರಾಜ್ಯದಲ್ಲಿ ಬುಧವಾರ (ಜ.19) ದಾಖಲೆ ಪ್ರಮಾಣದ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಹನ ಹೊರ್ಕಾರ ಮಗ ರೆಕ್ ಮತ್ತು ಅವನ ತಂದೆ ಲಸಿಕೆ ಪಡೆದಿದ್ದರು. ಆದರೂ ಅವರಿಗೆ ಕಳೆದ ಕ್ರಿಸ್​ಮಸ್ ವೇಳೆ ಕೊರೊನಾ ಸೋಂಕು ಬಂದಿತ್ತು. ಆದರೆ ನನ್ನ ತಾಯಿ ನಮ್ಮಿಂದ ಇರಲು ಒಪ್ಪಲಿಲ್ಲ. ಬೇಕೆಂದೇ ಕೊರೊನಾ ಸೋಂಕಿಗೆ ತೆರೆದುಕೊಂಡರು.

ಝೆಕ್ ಗಣರಾಜ್ಯದಲ್ಲಿ ಕೆಫೆ, ಬಾರ್, ಸಿನಿಮಾ ಮಂದಿರಾ ಸೇರಿದಂತೆ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರದೇಶಗಳಿಗೆ ಪ್ರವೇಶ ಪಡೆಯಲು ಲಸಿಕೆ ಪಡೆದಿರುವ ಅಥವಾ ಇತ್ತೀಚೆಗೆ ಕೊರೊನಾದಿಂದ ಚೇತರಿಸಿಕೊಂಡ ವಿವರ ಅತ್ಯಗತ್ಯ ಎಂದು ಅಲ್ಲಿನ ಸರಕಾರ ತಿಳಿಸಿತ್ತು.

ಜಾನಪದ ಗಾಯಕಿ ಹನಾ ಹೊರ್ಕಾ ಝೆಕ್ ಗಣರಾಜ್ಯದ ಅತಿ ಹಳೆಯ ಜಾನಪದ ಗಾಯನ ತಂಡ ಅಸೊನಾನ್ಸ್​ನ ಸದಸ್ಯೆಯಾಗಿದ್ದರು. ಒಮ್ಮೆ ಕೋವಿಡ್ ಬಂದು ಚೇತರಿಸಿಕೊಂಡರೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಸುಲಭವಾಗಲಿದೆ ಎನ್ನುವ ಕಾರಣ ಸೋಂಕಿತೆಯಾಗಲು ಹೊನಾ ಬರ್ಕಾ ನಿರ್ಧರಿಸಿದರು ಎಂದು ಅವರ ಮಗನ ಹೇಳಿಕೆ ಉಲ್ಲೇಖಿಸಿ ಬಿಬಿಸಿ ಜಾಲತಾಣ ವರದಿ ಮಾಡಿದೆ.