ಮೂಡುಬಿದಿರೆ ಬಳಿ ಅಪಘಾತ: ಯಕ್ಷಗಾನ ಮುಗಿಸಿ ಮನೆಗೆ ತೆರಳುತ್ತಿದ್ದ ಹಿರಿಯ ಕಲಾವಿದ ವೇಣೂರು ವಾಮನ‌ ಕುಮಾರ್ ಮೃತ್ಯು

0
311

ಸನ್ಮಾರ್ಗ ವಾರ್ತೆ

ಮೂಡಬಿದಿರೆ: ಇಂದು ಬೆಳ್ಳಂಬೆಳಗ್ಗೆ ನಡೆದ ರಸ್ತೆ ಅಪಘಾತವೊಂದರಲ್ಲಿ ಯಕ್ಷಗಾನ ಮುಗಿಸಿ ಮನೆಗೆ ತೆರಳುತ್ತಿದ್ದ ಕಲಾವಿದರೋರ್ವರು‌ ಮೃತಪಟ್ಟ ಘಟನೆ ಮೂಡಬಿದಿರೆ-ವೇಣೂರು ರಸ್ತೆಯ ಗಂಟಾಲ್ ಕಟ್ಟೆ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೃತಪಟ್ಟ ಕಲಾವಿದನನ್ನು ಕುಂದಾಪುರ ಹಿರಿಯಡ್ಕ ಮೇಳದ ಹಿರಿಯ ಕಲಾವಿದ ವೇಣೂರು ವಾಮನ ಕುಮಾರ್(46 ವ) ಎಂದು ಗುರುತಿಸಲಾಗಿದೆ. ಬೆಳಗ್ಗಿನ ಜಾವ ಮೂಡುಬಿದಿರೆ ಗಂಟಾಲಕಟ್ಟೆ ಸಮೀಪ ರಸ್ತೆ ಅಪಘಾತದಲ್ಲಿ ನಿಧನರಾದರು.

ನಿನ್ನೆ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ರಾತ್ರಿ ಯಕ್ಷಗಾನವನ್ನು ಮುಗಿಸಿ ಇಂದು ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿರುವಾಗ ಬೆಳಗಿನ ಜಾವ 6.30 ರ ಸುಮಾರಿಗೆ ಗಂಟಾಲ್ಕಟ್ಟೆ ಬಳಿ ಒಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎಂದು ವರದಿಯಾಗಿದೆ.

ಇವರು ಕಿಶನ್ ಹೆಗ್ಡೆ ಎಂಬವರ ಸಂಚಾಲಕತ್ವದ ಹಿರಿಯಡ್ಕ ಮೇಳದಲ್ಲಿ ಕಲಾವಿದರಾಗಿ ಮತ್ತು ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ತ್ರೀ ವೇಷ, ಕಥಾ ನಾಯಕನ ಪಾತ್ರ ಮಾಡುತ್ತಿದ್ದರು.