ಸಿಕ್ರಿ ಮಾತಾ ದೇವಸ್ಥಾನದ ಸಮೀಪವಿದ್ದ ಮುಸ್ಲಿಂ ಅಂಗಡಿಗಳನ್ನು ಧ್ವಂಸ ಮಾಡಿದ ದ್ವೇಷ ಕೋರರು

0
250

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಮೋದಿ ನಗರದಲ್ಲಿ ಹಿಂದುತ್ವ ಸಂಘಟನೆಗಳ ಸದಸ್ಯರು ಧರ್ಮ ದ್ವೇಷದ ಕೃತ್ಯ ಎಸಸಗಿದ್ದಾರೆ. ಸಿಕ್ರಿ ಮಾತಾ ದೇವಸ್ಥಾನದ ಹತ್ತಿರವಿದ್ದ ಮುಸ್ಲಿಂ ವ್ಯಕ್ತಿಯ ಹೋಟೆಲ್ ಮತ್ತು ಅಂಗಡಿಯನ್ನು ಬಲವಂತದಿಂದ ತೆರವುಗೊಳಿಸಿದ್ದಾರೆ. ಆದರೆ ಇವೆಲ್ಲ ನಡೆದಿದ್ದರೂ ಆಡಳಿತ ಈ ಬಗ್ಗೆ ಯಾವುದೇ ಮಧ್ಯಪ್ರವೇಶವನ್ನು ಮಾಡಿಲ್ಲ.

ನಾವು ಜಿಲ್ಲಾಡಳಿತದ ಅನುಮತಿಯೊಂದಿಗೆ ಈ ಅಂಗಡಿಯನ್ನು ತೆರೆದಿದ್ದೆವು. ಇದರಲ್ಲಿ ಸ್ವೀಟ್ಸ್ ಮತ್ತು ಪಾನೀಯಗಳನ್ನು ವಿತರಿಸಲಾಗುತ್ತಿತ್ತು . ನಾವು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಆದರೂ ನಮ್ಮ ಅಂಗಡಿಯನ್ನು ದ್ವಂಸ ಮಾಡಲಾಗಿದೆ ಎಂದು ಓರ್ವ ಅಂಗಡಿ ವ್ಯಾಪಾರಸ್ಥರು ಹೇಳಿದ್ದಾರೆ.

ಮುಸ್ಲಿಂ ವ್ಯಾಪಾರಸ್ಥರು ಮಾಂಸಾಹಾರ ಸೇವಿಸುತ್ತಾರೆ ಮತ್ತು ದೇವಸ್ಥಾನದ ಸಮೀಪ ಅವರು ಅಂಗಡಿ ಇಡುವಂತಿಲ್ಲ. ನವರಾತ್ರಿಯ ಸಮಯದಲ್ಲಿ ನಾವು ಉಪವಾಸ ಆಚರಿಸುತ್ತೇವೆ. ಇಂಥ ಸಮಯದಲ್ಲಿ ಇವರು ವಸ್ತುಗಳನ್ನು ಮಾರಾಟ ಮಾಡುವುದು ಸರಿಯಲ್ಲ. ಭಕ್ತರ ಭಾವನೆಗಳಿಗೆ ಇದು ನೋವುಂಟು ಮಾಡುತ್ತದೆ ಎಂದು ಧ್ವಂಸಗೈದ ಗುಂಪುಗಳು ಸಮರ್ಥಿಸಿವೆ.

ಈ ಅಂಗಡಿಗಳನ್ನು ನಾವು ವರ್ಷಗಳಿಂದ ಇಲ್ಲಿ ನಡೆಸುತ್ತಾ ಇದ್ದೇವೆ ನಾವು ಎಲ್ಲಾ ಧಾರ್ಮಿಕ ಆಚರಣೆಗಳನ್ನು ಗೌರವಿಸಿದ್ದೇವೆ. ಆದರೂ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.