ಹೊಸದಿಲ್ಲಿ, ಮಾ. 26: ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಇಬ್ಬರು ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸಿ ಮತಾಂತರಗೊಳಿಸಿದ ಘಟನೆಗೆ ಪ್ರತಿಕ್ರಿಯಿಸಿದ ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನ ಹೆಣ್ಣುಮಕ್ಕಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಮತ್ತು ಅವರನ್ನು ಮನೆಗೆ ಮರಳಿ ಕಳುಹಿಸಬೇಕೆಂದು ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ. ಬಾಲಕಿಯರ ವಯಸ್ಸು ಹದಿಮೂರು ಮತ್ತು ಹದಿನೈದು ವರ್ಷವಾಗಿಗಿದೆ. ಸ್ವಪ್ರೇರಣೆಯಿಂದ ಮತಾಂತರಗೊಳ್ಳುವ ಪ್ರೌಢ ವಯಸ್ಸು ಅವರ ವಯಸ್ಸಲ್ಲ ಎಂಬುದನ್ನು ಪಾಕಿಸ್ತಾನ ಪ್ರಧಾನಿ ಅರ್ಥಮಾಡಿಕೊಳ್ಳಬೇಕೆಂದು ವಿದೇಶ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಘಟನೆಯಲ್ಲಿ ಪಾಕಿಸ್ತಾನದ ಭಾರತದ ಹೈಕಮಿಶನರ್ ಅಜಯ್ ಬಿಶ್ವಾಸ್ರಿಂದ ವರದಿಯನ್ನು ಕೇಳಿರುವುದಾಗಿ ಸುಷ್ಮಾಸ್ವರಾಜ್ ಹೇಳಿದರು.
ಇದೇವೇಳೆ ಪಾಕಿಸ್ತಾನದ ಮೂಲದ ಸಮಾ ಟಿವಿ ವರದಿಯ ಪ್ರಕಾರ ಬಾಲಕಿಯರನ್ನು ಇಸ್ಲಾಮಾಬಾದಿನ ಹೈಕೋರ್ಟಿನಲ್ಲಿ ಹಾಜರು ಪಡಿಸಲಾಗಿದ್ದು, ಹೈಕೋರ್ಟು ಅವರ ಕೋರಿಕೆಯ ಮೇರೆಗೆ ಇಬ್ಬರು ಹೆಣ್ಣುಮಕ್ಕಳಿಗೆ ಫೆಡರಲ್ ಸರಕಾರ ರಕ್ಷಣೆ ನೀಡಬೇಕೆಂದು ಬುಧವಾರ ಆದೇಶಿಸಿದೆ. ಮತಾಂತರ ಗೊಂಡ ಹೆಣ್ಣುಮಕ್ಕಳು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಮುಖ್ಯ ನ್ಯಾಯಾಧೀಶ ಅತ್ಹರ್ ಮಿನಲ್ಲ ಅವರನ್ನೊಳಗೊಂಡ ಲಾಹೋರ್ ಹೈಕೋರ್ಟು ಪೀಠ ಯಾರದೇ ಬಲವಂತದಿಂದ ಮತಾಂತರಗೊಂಡಿಲ್ಲ ಎಂದು ಬಾಲಕಿಯರು ಕೋರ್ಟಿಗೆ ತಿಳಿಸಿದ್ದು ರಕ್ಷಣೆಗೆ ಮನವಿ ಮಾಡಿದ್ದಾರೆ. ಆದ್ದರಿಂದ ಇಬ್ಬರಿಗೂ ಫೆಡರಲ್ ಸರಕಾರ ರಕ್ಷಣೆ ನೀಡುವಂತೆ ಸರಕಾರಕ್ಕೆ ಆದೇಶಿಸಿದೆ. ಫಟನೆಯಲ್ಲಿ ಈಗಾಗಲೇ ಇವರಿಬ್ಬರ ಪತಿಯಂದಿರಾದ ಶಫಾಕತ್ ಮತ್ತು ಬರ್ಕತ್ ಎಂಬವರನ್ನು ಸಿಂಧ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಇವರಿಬ್ಬರೂ ಅರ್ಜಿ ಸಲ್ಲಿಸಿದ್ದಾರೆ.
ಇದೇ ವೇಳೆ ಎಸ್ಪಿ ದರ್ಜೆಯ ಮಹಿಳಾ ಅಧಿಕಾರಿ ಬಾಲಕಿಯರಿಗೆ ರಕ್ಷಣೆ ನೀಡಬೇಕೆಂದು ಹೈಕೋರ್ಟು ಆದೇಶಿಸಿದ್ದಲ್ಲದೆ ಪ್ರಕರಣದ ವಿವರವಾದ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
Two Hindu girls who converted to Islam will be provided security by federal government: court
ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರಿಯರನ್ನು ಅಪಹರಿಸಿ ಮತಾಂತರಗೊಳಿಸಿ ಮದುವೆ ಮಾಡಿಸಿದ್ದಾರೆ ಎಂದು ಬಾಲಕಿಯರ ಸಹೋದರ ಶಮನ್ ದಾಸ್ ಆರು ಮಂದಿ ಆರೋಪಿಗಳ ವಿರುದ್ಧ ಸಿಂಧ್ ಪ್ರಾಂತದ ಗೊಟ್ಕಿ ಪೊಲೀಸ್ ಠಾಣೆಯಲ್ಲಿ ಮಾರ್ಚ್ 21ರಂದು ದೂರು ನೀಡಿದ್ದರು. ನಂತರ ಪಾಕಿಸ್ತಾನಾದ್ಯಂತ ಬಲವಂತದ ಮತಾಂತರ ಪ್ರಕರಣ ಬಹುದೊಡ್ಡ ಕೋಲಾಹಲ ಸೃಷ್ಟಿಸಿತ್ತು.
ಸಿಂಧ್ ಪೊಲೀಸಧಿಕಾರಿ ಶಹಾಬುದ್ದೀನ್ರು ಬಾಲಕಿಯರ ಸಹೋದರ ಗೊಟ್ಕಿ ಠಾಣೆಯಲ್ಲಿ ಶಫ್ದಾರ್ ಮಲಿಕ್, ಬರ್ಕತ್ ಅಲಿ, ಅಮಾನ್ ಶಾ ಮತ್ತು ಇತರ ಮೂವರು ಅಪರಿಚಿತರ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಬಲವಂತದ ಮತಾಂತರಕ್ಕೊಳಗಾಗಿದ್ದಾರೆನ್ನಲಾದ ಹೆಣ್ಣುಮಕ್ಕಳು ಹದಿಮೂರು ಮತ್ತು ಹದಿನೈದು ವರ್ಷದವರೆಂದು ಬಾಲಕಿಯ ಕುಟುಂಬ ದೂರಿನಲ್ಲಿ ತಿಳಿಸಿದೆ. ಇದೇವೇಳೆ ಈ ವಯಸ್ಸಿನಲ್ಲಿ ಮದುವೆಗೆ ಪಾಕಿಸ್ತಾನದ ಕಾನೂನು ಒಪ್ಪಿಗೆ ನೀಡುವುದಾದರೆ ನನ್ನ ಕುಟುಂಬ ಈ ಮದುವೆಯನ್ನು ಒಪ್ಪಿಕೊಳ್ಳುತ್ತದೆ ಎಂದು ಹೆಣ್ಣುಮಕ್ಕಳ ಸಹೋದರ ಶಮನ್ ದಾಸ್ ಹೇಳಿದ್ದಾರೆ. ಇದೇವೇಳೆ ಮತಾಂತರಗೊಂಡಿದ್ದಾರೆನ್ನಲಾದ ಹುಡುಗಿಯರಿಬ್ಬರು ತಮ್ಮನ್ನು ವಯಸ್ಕರೆಂದು ಹೈಕೋರ್ಟಿನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಬಾಲಕಿಯ ಕುಟುಂಬ ನೀಡಿದ ದೂರಿನಲ್ಲಿ ರವೀನಾ ಹುಟ್ಟಿದ ದಿನಾಂಕ 2004 ಮತ್ತು ರೀನಾಳ ಹುಟ್ಟಿದ ದಿನಾಂಕ 2006 ಎಂದು ಸೂಚಿಸಲಾಗಿದೆ.












