ಪೋಷಕರ ತರಬೇತಿ ಹೇಗಿರಬೇಕು? ಹೆತ್ತವರಿಗೆ ಕೆಲವು ಅಮೂಲ್ಯ ಟಿಪ್ಸ್

0
647

ಸನ್ಮಾರ್ಗ ವಾರ್ತೆ

ಅಬ್ದುಲ್ ಹಮೀದ್ ನದ್ವಿ

ಮೂರ್ಚೆ ರೋಗ ಹೊಂದಿದ ಐದರ ಹರೆಯದ ಮಗನನ್ನು ತಂದೆಯು ಸುಪಾರಿ ನೀಡಿ ಕೊಂದ ಘಟನೆಯು ಎರಡು ವರ್ಷಗಳ ಹಿಂದೆ ನಮ್ಮ ರಾಜ್ಯದ ದಾವಣಗೆರೆಯಲ್ಲಿ ನಡೆಯಿತು. ಚಿಕಿತ್ಸೆ ನೀಡಲು ದುಡ್ಡು ಇಲ್ಲ ಎಂದಾಗ ಈ ಅಮಾನುಷವಾದ ಕುಕೃತ್ಯಕ್ಕೆ ತಂದೆ ಕೈ ಹಾಕಿದ್ದ. ಈ ಹೃದಯ ವಿದ್ರಾವಕ ಘಟನೆಯ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಇದೇ ರೀತಿ ಮಕ್ಕಳ ಅನಾರೋಗ್ಯದ ಕಾರಣವಾಗಿ ಇಡೀ ಕುಟುಂಬವೇ ದಯನೀಯ ಸ್ಥಿತಿಗೆ ಇಳಿದ ಹಲವಾರು ಘಟನೆಗಳು ನಮ್ಮ ನಡುವೆ ನಡೆಯುತ್ತಿವೆ.

ಸ್ವತಃ ತನ್ನ ಕೈಯಿಂದ ತನ್ನ ಮಗನನ್ನು ಕೊಲ್ಲಲಾಗದ ಆ ತಂದೆಯು ತನ್ನ ಗೆಳೆಯನ ಮೂಲಕ ತನ್ನ ಪೈಶಾಚಿಕವಾದ ಗುರಿಯನ್ನು ಈಡೇರಿಸಿದ್ದ. ಮಗ ಎಂಬ ಆತ್ಮಬಂಧ ಅದನ್ನು ತಡೆದಿತ್ತು. ಆದರೆ ಹತಾಶನಾದ ಆತನಿಗೆ ತನ್ನ ಮಗುವಿನ ಚಿಕಿತ್ಸೆಗೆ ಬೇಕಾದ ಹಣವನ್ನು ಸಂಗ್ರಹಿಸುವ ಗೋಜಿಗೆ ಹೋಗಲಿಲ್ಲ. ಅಂದರೆ ಆತ ಎಲ್ಲವನ್ನೂ ಋಣಾತ್ಮಕವಾಗಿ ಚಿಂತಿಸಿದನು. ಒಂದೋ ಅದನ್ನು ಕಾಪಾಡಲು ಅಥವಾ ಈ ಸಮಸ್ಯೆಯನ್ನು ನಿಗ್ರಹಿಸಲು ಹಣದ ಅಗತ್ಯವಿತ್ತು.

ಮಕ್ಕಳು ಮನೆಯ ಊರಿನ ಮತ್ತು ವಿಶ್ವದ ಸೊತ್ತಾಗಿದ್ದಾರೆ. ಚೆನ್ನೈಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಒಮ್ಮೆ ನೋಡಿರಿ. ಒಂಬತ್ತು ವರ್ಷಗಳ ಕಾಲ ಮೂರ್ಚೆ ರೋಗದಿಂದ ಬಳಲುತ್ತಿದ್ದ ತನ್ನ ಮಗನಿಗೆ ದಯಾಮರಣ ಒದಗಿಸಲು ತಂದೆ ನ್ಯಾಯಾಲಯದ ಮೊರೆ ಹೋಗಿದ್ದ. ನ್ಯಾಯಾಲಯ ಚಿಕಿತ್ಸೆ ಮುಂದುವರಿಸಲು ಆದೇಶ ನೀಡಿತ್ತು. ಆ ಮಗುವಿಗೆ ಹೊಸ ಜೀವನ ಲಭಿಸಿತು. ಇಂತಹ ಮಗುವ ನ್ನು ಮುಗಿಸಲು ಹೋಗದೆ ನೇರವಾಗಿ ನ್ಯಾಯಾಲಯದ ಮೆಟ್ಟಲು ಏರಿದಾಗ ಕಾನೂನು ಅವನನ್ನು ಕಾಪಾಡಿತು.

ಸುಶಿಕ್ಷಿತ ಸಭ್ಯ ಕುಟುಂಬದಲ್ಲಿ ಕೂಡಾ ಆತ್ಮಬಂಧದ ಕಾರುಣ್ಯದ ಪ್ರಜ್ಞೆಯನ್ನು ನಷ್ಟಕ್ಕೊಳ ಪಡಿಸುವ ಮನುಷ್ಯ ಹಳೆಯ ಕೆಟ್ಟ ಸಂಸ್ಕøತಿಯತ್ತ ಮುಖ ಮಾಡುವುದು ಶೋಚನೀಯ. ಹಾಗೆಯೇ ತನ್ನ ಮಗನಿಗಿರುವ ಮೂರ್ಚೆ ರೋಗವನ್ನು ಗುಣಪಡಿಸಲು ತನ್ನಲ್ಲಿದ್ದ ಗಾಂಜಾದಿಂದ ಎಣ್ಣೆ ತೆಗೆದು ಅದನ್ನು ಲಂಡನಿನ ಹಿತ್ರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ನೀಡದೆ ಸ್ಮರಣೀಯ ರಾದ ಮಾತೆಯೋರ್ವರ ವಾರ್ತೆಯು ಕಳೆದ ವರ್ಷ ನಡೆದಿತ್ತು. ಇದು ಕಾನೂನು ವಿರೋಧಿ ಯಾಗಿದ್ದರೂ ಮಗನ ರೋಗವನ್ನು ಗುಣಪಡಿಸಲು ಆ ತಾಯಿಗೆ ಇರುವ ಪರಿಶ್ರಮವನ್ನು ಮತ್ತು ಆಕೆಗಿರುವ ಪುತ್ರ ವಾತ್ಸಲ್ಯ ಸಂಬಂಧದ ಮಹತ್ವನ್ನು ಅರ್ಥೈಸಬಹುದು.

ಪೇರೆಂಟಿಂಗ್ ಅಥವಾ ಪಾಲನೆ ಪೋಷಣೆ ಎಂದರೆ ಹಸುಳೆಯಿಂದ ಹಿಡಿದು ಅವರು ಪ್ರೌಢ ರಾಗುವವರೆಗೆ ಮಗುವಿನ ದೈಹಿಕ, ಸಾಮಾಜಿಕ ಮತ್ತು ಬೌದ್ಧಿಕ ಬೆಳವಣಿಗೆಗಳನ್ನು ಪ್ರೋತ್ಸಾಹಿಸಿ ಬೆಂಬಲಿಸುವ ಪ್ರಕ್ರಿಯೆಯಾಗಿದೆ.

ನೀವು ಏನಾಗಲು ಬಯಸುವಿರಿ ಎಂದು ಯಾರಾದರೂ ಹತ್ತು ವರ್ಷ ಮೊದಲು ಮಕ್ಕಳಲ್ಲಿ ಪ್ರಶ್ನಿಸಿದರೆ ನಾನು ಟಿ.ವಿ. ಆಗಲು ಬಯಸುವೆ ಎಂದು ಉತ್ತರಿಸಬಹುದು. ಅದೇ ಪ್ರಶ್ನೆಯನ್ನು ಇಂದಿನ ಮಕ್ಕಳಲ್ಲಿ ಕೇಳಿದರೆ ನಮ್ಮೊಳಗಿನ ಸಂವಹನದ ಕೊರತೆಯಿಂದ ನಾವು ತಂದೆ ತಾಯಿಯ ಕೈಯಲ್ಲಿರುವ ಮೊಬೈಲು ಆಗಲು ಬಯಸುವೆ ಎಂದು ಉತ್ತರಿಸಬಹುದು. ಎಷ್ಟೊಂದು ಬದಲಾವಣೆ ನಡೆ ದಿದೆಯೆಂಬುದನ್ನು ಊಹಿಸ ಬೇಕು. ಆದ್ದರಿಂದ ನಾವು ಈ ಕೆಳಗೆ ಸೂಚಿಸಿರುವ ಯಾವ ಕೆಟಗರಿಯಲ್ಲಿದ್ದೇವೆ ಎಂಬುದನ್ನೊಮ್ಮೆ ಚಿಂತಿಸಬೇಕು.

1. ಅಥೋರಿಟಿಯನ್ ಪೇರೆಂಟ್: ಮಕ್ಕಳ ಮೇಲೆ ಅತಿಯಾದ ನಿಯಂತ್ರಣ ಹೇರುವುದು ಹೆಲಿಕಾಪ್ಟರ್ ಪೇರೆಂಟಿಂಗ್ ರೀತಿಯಾಗಿದೆ. ಇಲ್ಲಿ ತಂದೆ ತಾಯಿ ಮಕ್ಕಳಿಗೆ ಯಾವುದೇ ರೀತಿಯ ಆಯ್ಕೆಯ ಅವಕಾಶ ನೀಡುವುದಿಲ್ಲ. ಇದು ಒಂದು ರೀತಿಯ ಸರ್ವಾಧಿಕಾರಿ ಧೋರಣೆ ಯಾಗಿದೆ.

2. ಅಥೋರಿಟಿ ಪೇರೆಂಟ್: ಮಕ್ಕಳೊಂದಿಗೆ ಧನಾತ್ಮಕವಾದ ಸಂಭಂಧ ಬೆಳೆಸುವ ಪೋಷಕ.

3. ಪರ್ಮೆಸಿವ್ ಪೇರೆಂಟ್: ಓರ್ವ ಪೋಷಕ ಎಂಬ ನೆಲೆಯಲ್ಲಿ ಸ್ವತಃ ಆತ್ಮ ಮಿತ್ರನಂತೆ ಮಕ್ಕಳೊಂದಿಗೆ ಬೆರೆಯುವ ಪೋಷಕ.

4. ಅನ್ ಇನ್ವಾಲ್ವ್‍ಡ್ ಪೇರೆಂಟ್: ಮಕ್ಕಳ ಅಗತ್ಯವನ್ನೂ ಈಡೇರಿಸಲು ಸಮಯವಿಲ್ಲದ ಅವರ ಬೇಡಿಕೆಗಳನ್ನು ಈಡೇರಿಸದ ರಬ್ಬರ್ ಸ್ಟಾಂಪ್‍ನಂತಿರುವ ಪೋಷಕ.

ನಿಮ್ಮ ಮಕ್ಕಳೊಂದಿಗೆ ಏಳು ವರ್ಷದ ತನಕ ಆಟವಾಡಿರಿ. ಮುಂದಿನ ಏಳು ವರ್ಷ ಅವರಿಗೆ ಗೌರವವನ್ನು ಕಲಿಸಿರಿ. ಮುಂದಿನ ಏಳು ವರ್ಷ ಅವನೊಂದಿಗೆ ಸಹೋದರನಂತೆ ವರ್ತಿಸಿರಿ. ಹೀಗಿದ್ದರೆ ಮಾತ್ರ ಅವರು ನಿಮ್ಮ ನಿಯಂತ್ರಣ ದಲ್ಲಿರುವರು ಎಂಬ ವಿಚಾರ ಅರಭಿ ಗ್ರಂಥ ವೊಂದರಲ್ಲಿದೆ. ಖಲೀಫಾ ಉಮರ್(ರ) ಹೇಳಿರು ವರೆಂದು ಇಮಾಮ್ ಶಾಫೀ(ರ) ಹೀಗೆ ವರದಿ ಮಾಡಿದ್ದಾರೆ.

ಮಗನು ಅಗೌರವದಿಂದ ವರ್ತಿಸುತ್ತಿದ್ದಾನೆ ಎಂಬ ದೂರಿನೊಂದಿಗೆ ಬಂದ ತಂದೆಯೊಡನೆ ಉಮರ್(ರ)ರವರು “ನೀವು ನಿಮ್ಮ ತಂದೆ ಯೊಂದಿಗೆ ಅಗೌರವದಿಂದ ವರ್ತಿಸಿರಬಹುದು” ಎಂದು ಹೇಳಿ ಕಳುಹಿಸಿರುವುದಾಗಿ ಇತಿಹಾಸದಲ್ಲಿ ಗ್ರಂಥಗಳಲ್ಲಿ ದಾಖಲಾಗಿದೆ.
ಮಕ್ಕಳನ್ನು ಪ್ರೀತಿಸಿದರೆ ಸಾಲದು ಅದು ಅವರಲ್ಲಿ ಭಾವನಾತ್ಮಕವಾಗಿ ಪ್ರಭಾವಪೂರ್ಣವಾಗಿರ ಬೇಕು. ಅವರು ನಿದ್ರಿಸಿದಾಗ ಚುಂಬಿಸುವುದಲ್ಲ. ಬದಲಾಗಿ ಅವರು ಎಚ್ಚರದಲ್ಲಿರುವಾಗ ಚುಂಬಿಸ ಬೇಕು. ಲಾ ಲಿಸಬೇಕು. ವಾತ್ಸಲ್ಯ ಹಂಚಬೇಕು.

ನೀವು ಮಕ್ಕಳಿಗೆ ಏನಾದರೂ ವಾಗ್ದಾನ ನೀಡಿದರೆ ಅದನ್ನು ನೇರವೇರಿಸಬೇಕು. ಅವರ ಮುಂದೆ ಜಗಳವಾಡಬಾರದು. ಸುಳ್ಳು ಹೇಳ ಬಾರದು. ಇವೆಲ್ಲವೂ ಪ್ರವಾದಿವರ್ಯರು(ಸ) ಕಲಿಸಿದ ಪೇರೆಂಟಿಂಗ್‍ನ ಸಂದೇಶಗಳಾಗಿವೆ. ನಾವು ಅವರಿಗೆ ಅನ್ನಾಹಾರಗಳನ್ನು ನೀಡುವವರು ಎಂಬ ಪ್ರಜ್ಞೆ ನಮ್ಮಲ್ಲಿದ್ದುಕೊಂಡೇ ನಾವು ಅವರೊಡನೆ ಕಾರ್ಯಪ್ರವೃತ್ತರಾಗಬೇಕು. ಈ ಅತಿ ಸೂಕ್ಷ್ಮವಾದ ಗಂಭೀರವಾದ ಪ್ರಜ್ಞಾ ಪೂರ್ವಕ ವಾದ ಪೇರೆಂಟಿಂಗ್‍ನ್ನು ಕುರ್‍ಆನಿನ ಭಾಷೆಯಲ್ಲಿ ತರಬೇತಿ ಎಂದು ಹೇಳಲಾಗಿದೆ.

“ನಯವಿನಯ ಮತ್ತು ಕರುಣೆಯೊಂದಿಗೆ ಅವರ ಮುಂದೆ ಬಾಗಿಕೊಂಡಿರಿ. “ಓ ನನ್ನ ಪ್ರಭೂ! ಇವರು ನನ್ನನ್ನು ನನ್ನ ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ಸಾಕಿದಂತೆಯೇ ನೀನು ಅವರ ಮೇಲೆ ಕೃಪೆ ತೋರು” ಎಂದು ಪ್ರಾರ್ಥಿಸಿರಿ.” (ಬನೀ ಇಸ್ರಾಈಲ್: 24)

ಓದುಗರೇ, sanmarga ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.