ಕೊರೋನಾ ಕಷ್ಟಕಾಲದಲ್ಲಿ ಸಾವಿರಾರು ಮಂದಿಗೆ ಆಸರೆಯಾದ ಹೆಚ್.ಆರ್.ಎಸ್.: 13,500 ಕುಟುಂಬಗಳಿಗೆ ರೇಷನ್ ಕಿಟ್

0
1211

ಸನ್ಮಾರ್ಗ ವಾರ್ತೆ

ಬೆಂಗಳೂರು, ಏಪ್ರಿಲ್ ಕೊರೋನಾದಿಂದಾಗಿ ಇಡೀ ದೇಶ ಲಾಕ್ ಡೌನ್ ಗೊಂಡಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಮಂದಿಗೆ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ( HRS) ಸಹಾಯ ಒದಗಿಸಿದೆ.

ಎಚ್.ಆರ್.ಎಸ್ ಇದರ ರಾಜ್ಯ ಸಂಚಾಲಕರಾದ ಮುಹಮ್ಮದ್ ಮರಕಡರವರು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 30 ಜಿಲ್ಲೆಗಳಲ್ಲಿ HRS ಸೇವಾ ಕಾರ್ಯ ನಿರ್ವಹಿಸಿದ್ದು 13,500 ಕುಟುಂಬಗಳಿಗೆ ರೇಷನ್ ಕಿಟ್ ಒದಗಿಸಿದೆ. ಸರಿ ಸುಮಾರು 1000/- ರೂ.ಯ ಈ ರೇಷನ್ ಕಿಟ್ ನಲ್ಲಿ ಅಕ್ಕಿ ಸೇರಿದಂತೆ ಹಲವಾರು ಇತರ ದಿನ ಬಳಕೆಯ ರೇಷನ್ ಸಾಮಗ್ರಿಳಿದ್ದುವು ಎಂದು ಅವರು ತಿಳಿಸಿದ್ದಾರೆ.

ಈವರೆಗೆ ಸುಮಾರು 12,560 ಮಂದಿಗೆ ಆಹಾರ ತಯಾರಿಸಿ ವಿತರಿಸಲಾಗಿದ್ದು ಲಾಕ್ ಡೌನ್ ಆದ ಸಮಯದಿಂದಲೂ ಎಚ್.ಆರ್.ಎಸ್ ಕಾರ್ಯಕರ್ತರು ಆಹಾರ ತಯಾರಿಸಿ ಪ್ರತಿ ದಿನ ಎರಡು ಹೊತ್ತು ವಲಸೆ ಕಾರ್ಮಿಕರು,ಆಶ್ರಯವಿಲ್ಲದವರಿಗೆ ಹಾಗೂ ಲಾಕ್ ಡೌನಲ್ಲಿ ಸಿಲುಕಿ ಹಾಕಿಕೊಂಡ ಜನರಿಗೆ, ವಿದ್ಯಾರ್ಥಿಗಳಿಗೆ ಆಹಾರ ಒದಗಿಸುತ್ತಿದೆ. ಈ ಸೇವಾ ಕಾರ್ಯದಲ್ಲಿ ಎಚ್.ಆರ್.ಎಸ್ ಆಯ್ದ ತರಬೇತುಗೊಂಡ ಕಾರ್ಯಕರ್ತರ ಜೊತೆಗೆ ಎಸ್ ಐ ಓ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ನ ಕಾರ್ಯಕರ್ತರು ಸೇರಿ ಸುಮಾರು ಒಂದು ಸಾವಿರ ಕಾರ್ಯಕರ್ತರು ನಿರತರಾಗಿದ್ದಾರೆ. ಆಡಳಿತ ಮತ್ತು ಆರೋಗ್ಯ ಇಲಾಖೆಯ ನಿಯಮಗಳನ್ನು ಪಾಲಿಸುತ್ತಾ, ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ತೀರಾ ಅಗತ್ಯವಿದ್ದ ಸುಮಾರು 100 ಮಂದಿಗೆ ವೈದ್ಯಕೀಯ ಸಹಾಯ, ಸುಮಾರು 500 ಮಂದಿಗೆ ತುರ್ತು ಸಾರಿಗೆ ವ್ಯವಸ್ಥೆ ಒದಗಿಸಲಾಗಿದೆ. ಸಾರ್ವಜನಿಕ ಉದಾರ ಸಹಾಯ ಧನ ಹಾಗೂ ಎಸ್.ಐ.ಓ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯಕರ್ತರ ಸಹಾಯದಿಂದ ಈ ಕಾರ್ಯವನ್ನು ನಡೆಸಲು ಸಾಧ್ಯವಾಗಿದೆ. ಲಾಕ್ ಡೌನ್ ಮುಗಿಯುವರೆಗೆ ಈ ಸೇವೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.