ಮುದ್ದೇಬಿಹಾಳ: ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ನೆರೆ ಸಂತ್ರಸ್ತರಿಗೆ ರೇಷನ್ ಕಿಟ್ ವಿತರಣೆ

0
200

ಸನ್ಮಾರ್ಗ ವಾರ್ತೆ

ಮುದ್ದೆಬೀಹಾಳ:ಇಲ್ಲಿನ ನೆರೆ ಸಂತ್ರಸ್ತರಿಗೆ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ(ಹೆಚ್‌ಆರ್‌ಎಸ್) ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಕಳೆದ 2 ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು,  ಹಲವಾರು ಮನೆಗಳು ನೀರಿನಿಂದ ಆವೃತ್ತವಾಗಿವೆ. ಬಡ ಕುಟುಂಬಗಳ ಜೀವನ ನೆರೆಯಿಂದ ಬಹಳ ಸಂಕಷ್ಟದಲ್ಲಿದ್ದು ಸರ್ಕಾರದ ಪರಿಹಾರಕ್ಕಾಗಿ ಇನ್ನು ಕಾಯುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ಹೆಚ್‌ಆರ್‌ಎಸ್ ರೇಷನ್ ಕಿಟ್ ವಿತರಿಸಿ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದೆ.

ಈ ಸಂದರ್ಭದಲ್ಲಿ ಜಿಲ್ಲೆಯ ಎಚ್, ಆರ್, ಎಸ್, ಕೋಆರ್ಡಿನೇಟರ್ ಅಬ್ದುಲ್ ಕದಿರ್ ಹಾಗೂ ಜಮಾಅತೆ ಇಸ್ಲಾಮಿ ಮುದ್ದೇಬಿಹಾಳ ನಿಯೋಗವು ಹಾನಿಗೊಳಗಾದ ಕಿರಾಣಿ ಅಂಗಡಿಗಳ ಕುರಿತು ಸರ್ವೇ ನಡೆಸಿದರು. ನೆರೆಯಿಂದಾಗಿ ಕಿರಾಣಿ ಅಂಗಡಿಗಳು, ಅಹಾರ ಧಾನ್ಯಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ಹಾನಿಗೊಳಗಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತಹಸಿಲ್ದಾರ್ ಹಾಗೂ ಡಿಸಿ ಅವರಿಗೆ ಮನವಿಯನ್ನು ಮಾಡುವ ಮೂಲಕ ಸರಕಾರಕ್ಕೆ  ಇವರತ್ತ ಗಮನಹರಿಸಲು ಹಾಗೂ  ಶೀಘ್ರ ಪರಿಹಾರವನ್ನು  ಮನವಿ ಮಾಡುವುದಾಗಿ ಅವರು ಹೇಳಿದರು‌.

ಈ ಸಂದರ್ಭದಲ್ಲಿ ಜಮಾಅತ್ ಇಸ್ಲಾಮಿ ಹಿಂದ್ ಮುದ್ದೆಬೀಹಾಳ ಸಂಚಾಲಕರಾದ ಎಂ ಡಿ ಜರತಾರ್ಗರ್, ಸಮಾಜ ಸೇವೆ ಘಟಕದ ಸಂಚಾಲಕರಾದ ಮಹಮ್ಮದ್ ಯಾಸಿನ್ ಪಟೇಲ್, ಮುಹಮ್ಮದ್ ರಫೀಕ್ ಮಾಕಂದಾರ್, ಅಬ್ದುಲ್ ಅಲಿಮ ಮೋಮಿನ್, ವಜೀರ್ ಹುಸೇನ್ ಖಾನ್, ಮುಹಮ್ಮದ್ ಚಪ್ಪರಬಂದು ಮುಂತಾದವರು ಇದ್ದರು.