ಸನ್ಮಾರ್ಗ ವಾರ್ತೆ
ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೋಟೋ ತೆಗೆಯುವುದು ವಿಡಿಯೋಗಳನ್ನು ರೆಕಾರ್ಡ್ ಮಾಡುವುದು ಮತ್ತು ನೇರ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಹೊಸ ನಿರ್ಬಂಧಗಳು ವಿಮಾನ ನಿಲ್ದಾಣದಲ್ಲಿನ ಉದ್ಯೋಗಿಗಳು ಮತ್ತು ಸಂಸ್ಥೆಗಳಿಗೂ ಅನ್ವಯಿಸುತ್ತದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ನೌಕರರು ಮಾಹಿತಿಗಳನ್ನು ಬಹಿರಂಗಪಡಿಸುವುದನ್ನು ಕೂಡ ನಿಷೇಧಿಸಲಾಗಿದೆ.
ವಿಮಾನ ನಿಲ್ದಾಣದ ನೌಕರರು ಮತ್ತು ಸಂಸ್ಥೆಗಳು ತಮ್ಮ ಕೆಲಸದ ಸ್ಥಳಗಳಲ್ಲಿ ಚಿತ್ರಗಳನ್ನು ಅಥವಾ ವಿಡಿಯೋಗಳನ್ನು ತೆಗೆದುಕೊಳ್ಳಲು ಅಥವಾ ನೇರ ಪ್ರಸಾರವನ್ನು ಮಾಡಲು ಮೊಬೈಲ್ ಫೋನ್ ಗಳು ಕ್ಯಾಮೆರಾ ಗಳು ಅಥವಾ ಇತರ ತಾಂತ್ರಿಕ ಸಾಧನಗಳನ್ನು ಬಳಸಲು ನಿಷೇಧ ಹೇರಲಾಗಿದೆ. ಈ ನಿರ್ಬಂಧ ವಿಮಾನ ಪಾರ್ಕಿಂಗ್ ಪ್ರದೇಶಗಳು ಪ್ರಯಾಣಿಕರ ಟರ್ಮಿನಲ್ ಗಳು ಆಡಳಿತ ಮತ್ತು ತಾಂತ್ರಿಕ ಕಟ್ಟಡಗಳು ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ವ್ಯಾಪ್ತಿಯಲ್ಲಿರುವ ಇತರ ಸ್ಥಳಗಳಿಗೂ ಅನ್ವಯಿಸುತ್ತದೆ ಎಂದು ತಿಳಿದು ಬಂದಿದೆ.












