ಸನ್ಮಾರ್ಗ ವಾರ್ತೆ
ಇರಾನಿನ ಪರಮಾಣು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವವರಿಗೆ 20 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ. ಮಾತ್ರ ಅಲ್ಲ ಅಂಥವರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವುದಾಗಿಯೂ ಭರವಸೆ ನೀಡಿದೆ.
ನಾವು ಇರಾನ್ ಮೇಲೆ ದಾಳಿ ಮಾಡದೆ ಇರುತ್ತಿದ್ದರೆ ಇಂದು ಇಸ್ರೇಲ್ ಇರ್ತಾ ಇರಲಿಲ್ಲ. ಅವರು ಪರಮಾಣು ಹೊಂದಿದ್ದರೆ ಅದನ್ನು ಅವರು ಬಳಸುತ್ತಿದ್ದರು. ಅವರು ಮಧ್ಯ ಪ್ರಾಚ್ಯವನ್ನು ನಾಶ ಮಾಡುತ್ತಿದ್ದರು ಎಂದು ದಿನದ ಹಿಂದೆ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಹೇಳಿದ್ದರು.
ಆದರೆ ಎಂಟು ತಿಂಗಳ ಯುದ್ಧದಲ್ಲಿ ಇರಾನಿನ ಆರ್ಥಿಕತೆ ಮತ್ತು ಮಿಲಿಟರಿ ತೀವ್ರವಾಗಿ ಹಾನಿಗೊಳದಾಗಿದೆ. ಆದ್ದರಿಂದಲೇ ಇರಾನ್ ಸಂಘರ್ಷವನ್ನು ಕೊನೆಗಾಣಿಸಲು ಉತ್ಸುಕವಾಗಿದೆ. ಎಂದವರು ಹೇಳಿದರು.












