ಮಂಗಳೂರು: ಸಾಮಾಜಿಕ ಕಾರ್ಯಕರ್ತ, ಯುವ ಉದ್ಯಮಿ ಮುಹಮ್ಮದ್ ತ್ವಾಹಿರ್ ನಿಧನ

0
24

ಸನ್ಮಾರ್ಗ ವಾರ್ತೆ

ಮಂಗಳೂರು: ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಯುವ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದ ಮುಹಮ್ಮದ್ ತ್ವಾಹಿರ್ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿದ್ದು, ಪುತ್ರ ಹಾಗೂ ಓರ್ವ ಪುತ್ರಿ, ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಉಳ್ಳಾಲದ ಮುಕ್ಕಚ್ಚೇರಿ ನಿವಾಸಿಯಾದ ತ್ವಾಹಿರ್, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತ್ವಾಹಿರ್ ಅವರು ಹಲವು ಮಸೀದಿ, ಮದ್ರಸಗಳ ನಿರ್ಮಾಣ ಮತ್ತು ಪುನರುಜೀವನಕ್ಕೆ ಶ್ರಮಿಸಿದ್ದರು. ಸೌಮ್ಯ ವ್ಯಕ್ತಿತ್ವದ ತ್ವಾಹಿರ್ ಅವರು ಸ್ಥಳೀಯವಾಗಿ ಜನರ ಸಮಸ್ಯೆ ಗಳ ಸ್ಪಂದಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ಚಿರಪರಿಚಿತರಾಗಿದ್ದರು. ತಾಹಿರ್ ಅವರ ಸಹೋದರ ಫಿರೋಝ್ ಮುಕ್ಕಚ್ಚೇರಿಯ ತೌಹೀದ್ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಯತರ ತಂದೆ ಇಸ್ಮಾಯಿಲ್ ಫಕೀರ್ ಅವರು ಕೂಡ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರು. ತಾಹಿರ್ ಅವರು ಕೂಡಾ ತಮ್ಮನ್ನು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಸದಾ ನಗುಮುಖದೊಂದಿಗೆ ಎಲ್ಲರನ್ನೂ ಮಾತನಾಡಿಸುತ್ತಿದ್ದ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಪಾರ್ಥಿವ ಶರೀರದ ಅಂತಿಮ ದರ್ಶನವು ಮುಕ್ಕಚ್ಚೇರಿಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಸರ್ ನಮಾಜ್ ನ ಬಳಿಕ ಮುಕ್ಕಚ್ಚೇರಿಯ ತೌಹೀದ್ ಮಸೀದಿಯ ಖಬರ ಸ್ಥಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮುಹಮ್ಮದ್ ತಾಹಿರ್ ಅವರ ನಿಧನಕ್ಕೆ ವಿವಿಧ ಸಂಘಟನೆಯ ಮುಖಂಡರು, ಸಾಮಾಜಿಕ, ಧಾರ್ಮಿಕ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here