ಚೀನಾದಲ್ಲಿ ಮಾನವಹಕ್ಕು ಕಾರ್ಯಕರ್ತೆ ಬಂಧನ

0
391

ಸನ್ಮಾರ್ಗ ವಾರ್ತೆ

ಬೀಜಿಂಗ್,ಅ.26: ಹಾಕಾಂಗ್, ತೈವಾನ್ ಸಂದರ್ಶಿಸಿ ಮರಳುತ್ತಿದ್ದ ಚೀನಾದ ಪ್ರಮುಖ ಪತ್ರಕರ್ತೆ, ಹೋರಾಟಗಾರ್ತಿ ಹುವಾಂಗ್ ಸೂಯಿಯವರನ್ನು ಬಂಧಿಸಲಾಗಿದೆ. ಸಮಸ್ಯೆ ಸೃಷ್ಟಿಸಲು ಯತ್ನಿಸಿದರು ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿದೆ ಎಂದು ಅವರ ಗೆಳೆಯರು ತಿಳಿಸಿದ್ದು, ಜೈಲಿಗೆ ಹಾಕಲು ಮಾನವಹಕ್ಕು ಕಾರ್ಯಕರ್ತರ ವಿರುದ್ಧ ಚೀನಾ ಈ ಆರೋಪವನ್ನು ಹೊರಿಸುತ್ತಿದೆ. ಹಾಂಕಾಂಗ್ ಪ್ರತಿಭಟನೆಯ ಕುರಿತು ಹುವಾಂಗ್ ಲೇಖನ ಪ್ರಕಟಿಸಿದ ನಂತರ ಇವರ ಕುಟುಂಬಕ್ಕೆ ಚೀನಾದ ಪೊಲೀಸರಿಂದ ಬೆದರಿಕೆಯಿತ್ತು. ಕಳೆದ ಆಗಸ್ಟ್‌ನಲ್ಲಿ ಹುವಾಂಗ್‍ರ ಪಾಸ್‍ಪೋರ್ಟು ಮತ್ತು ಇತರ ಪ್ರಯಾಣ ಸೌಕರ್ಯದ ದಾಖಲೆಗಳನ್ನು ಗ್ವಾಂಗ್ಸ್ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.