ಚೆನ್ನೈ, ಜೂ. 25: ರಾಜ್ಯದಲ್ಲಿ ನೀರಿನ ಅಭಾವ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ವಾಟರ್ ಎಟಿಎಂ ಆರಂಭಿಸಲಾಗಿದೆ. ತಂಜಾವೂರಿನ ಪಟ್ಟುಕೋಟ್ಟ ನಗರಸಭೆ 33 ವಾರ್ಡುಗಳಲ್ಲಿ ಸ್ವಯಂಸೇವಾ ಸಂಘಟನೆಗಳ ಸಹಾಯದಲ್ಲಿ ವಾಟರ್ ಎಟಿಎಂ ತೆರೆಯಲು ತೀರ್ಮಾನಿಸಿದೆ.
20 ಲೀಟರ್ ಗೆ ಏಳು ರೂಪಾಯಿ ಬೆಲೆ ಇದೆ. ಒಂದು ಲೀಟರ್ ಒಂದು ರೂಪಾಯಿ. ಸಾರ್ವಜನಿಕ ಬಾವಿಗಳಿಂದ ನೀರನ್ನು ಸಂಗ್ರಹಿಸಿ ಶುದ್ಧ ನೀರು ವಿತರಣೆ ಮಾಡಲಾಗುತ್ತಿದೆ. ಈ ರೀತಿಯಲ್ಲಿ ರಾಜ್ಯದಾದ್ಯಂತ ವಾಟರ್ ಎಟಿಎಂ ತೆರೆಯಲು ಸರಕಾರ ಯೋಜನೆ ರೂಪಿಸುತ್ತಿದೆ.












