ದೇಶ ಸುರಕ್ಷೆಗೆ ಅಪಾಯ: ಮತ್ತೆ 54 ಚೀನ ಆ್ಯಪ್‌ಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

0
312

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದ ಸುರಕ್ಷೆಯ ಕಾರಣದಿಂದ ಚೀನದ 54 ಆ್ಯಪ್‍ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ವಿವಿಧ ವೀಡಿಯೊ ಎಡಿಟರ್, ಆ್ಯಪ್‌ ಲಾಕ್ ಸಹಿತ ಹೆಚ್ಚು ಪ್ರಚಾರವಿರುವ ಆ್ಯಪ್‍ಗಳು ಇದರಲ್ಲಿ ಒಳಗೊಂಡಿದೆ. ಬಳಕೆದಾರರ ಫೋನಿನಿಂದ ನಿರ್ಣಾಯಕ ವಿವರಗಳನ್ನು ಇವು ಸಂಗ್ರಹಿಸುತ್ತವೆ ಎಂದು ಕೇಂದ್ರದ ಇಲೆಕ್ಟ್ರಾನಿಕ್ಸ್ ಆಂಡ್ ಐಟಿ ಸಚಿವಾಲಯ ತಿಳಿಸಿತು.

ಸ್ವೀಟ್ ಸೆಲ್ಫಿ, ಬ್ಯೂಟಿ ಕ್ಯಾಮರಾ, ಗರೇನ, ಫ್ರೀ ಫಯರ್ ಇಲ್ಯೂಮಿನೇಟ್, ವಿವಾ ವೀಡಿಯೊ ಎಡಿಟರ್, ಟೆನ್‍ಸಂಟ್‍ಕ್ರಿಸಿವರೆ, ಒನ್‍ಮ್ಯಾಜಿ ಅರೀಣ, ಆ್ಯಪ್‌ಲಾಕ್, ಡ್ಯುವಲ್ ಸ್ಪೇಸ್ ಲೈಟ್ ಸಹಿತ 54 ಆಪ್‍ಗಳು ನಿಷೇಧಕ್ಕೊಳಗಾಗಿವೆ. ಫೋನ್‍ಗಳ ವಿವಿಧ ವಿವರಗಳನ್ನು ಇದು ಕಲೆ ಹಾಕಿ ದುರುಪಯೋಗಿಸುತ್ತದೆ. ಸೂಕ್ಷ್ಮ ವಿವರಗಳನ್ನು ಸಂಗ್ರಹಿಸುತ್ತಿವೆ. ಇದು ದುರುಪಯೋಗಿಸಲು ಬೇರೆ ದೇಶದ ಸರ್ವರ್‌ಗಳಿಗೆ ಹಾಕುತ್ತದೆ ಎಂದು ಐಟಿ ಸಚಿವಾಲಯ ತಿಳಿಸಿತು. ಕಳೆದ ವರ್ಷ ಜೂನ್‍ನಲ್ಲಿ 59 ಆ್ಯಪ್‍ಗಳನ್ನು ಭಾರತ ನಿಷೇಧಿಸಿತ್ತು. ದೇಶದ ಹೆಚ್ಚು ಪ್ರಚಾರದಲ್ಲಿದ್ದ ಟಿಕ್‍ಟಾಕ್, ವಿ-ಚಾಟ್, ಯುಸಿ ನ್ಯೂಸ್, ಪಬ್ಜಿ ನಿಷೇಧಕ್ಕೊಳಗಾಗಿದ್ದವು.

ಗಲ್ವಾನ್‍ನಲ್ಲಿ ಭಾರತ ಚೀನ ಘರ್ಷಣೆಯ ನಂತರ ಸರಕಾರ ಈ ಕ್ರಮ ಕೈಗೊಂಡಿತ್ತು. ಇದರ ನಂತರವೂ ಭದ್ರತಾ ಕಾರಣದಿಂದ ಹಲವು ಆ್ಯಪ್‍ಗಳನ್ನು ನಿಷೇಧಿಸಲಾಗಿತ್ತು. 2020 ನವೆಂಬರಿನಲ್ಲಿ 43 ಆ್ಯಪ್‍ಗಳನ್ನು ಮತ್ತು ಕಳೆದ ವರ್ಷ ಸೆಪ್ಟಂಬರಿನಲ್ಲಿ 118 ಆ್ಯಪ್‍ಗಳನ್ನು ಕೇಂದ್ರ ಸರಕಾರ ನಿಷೇಧಿಸಿತ್ತು.