ಸನ್ಮಾರ್ಗ ವಾರ್ತೆ
ಕೊರೋನ ವ್ಯಾಕ್ಸಿನ್ ನಿರ್ಮಾಣದಲ್ಲಿ ಭಾರತದತ್ತ ಜಗತ್ತು ನಿರೀಕ್ಷೆಯನ್ನಿರಿಸಿದೆ. ಭಾರತದ ಔಷಧೀಯ ಉದ್ಯಮವು ಕೋವಿಡ್-19 ಲಸಿಕೆಯನ್ನು ತನ್ನ ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೈಕ್ರೋಸಾಫ್ಟ್ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
ವ್ಯಾಕ್ಸಿನ್ಗೆ ಸಂಬಂಧಿಸಿದಂತೆ ಭಾರತದಲ್ಲಿ ಅನೇಕ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಕೊರೋನಾ ಲಸಿಕೆ ತಯಾರಿಸಲು ಭಾರತದ ಔಷಧ ಉದ್ಯಮವು ಮಹತ್ವದ ಕೆಲಸಗಳನ್ನು ಮಾಡುತ್ತಿದೆ ಎಂದು ಅವರು ನುಡಿದರು.
‘ಕೋವಿಡ್-19: ಇಂಡಿಯಾಸ್ ವಾರ್ ಎಗೇನ್ಸ್ಟ್ ದಿ ವೈರಸ್’ ಸಾಕ್ಷ್ಯಚಿತ್ರದಲ್ಲಿ ಬಿಲ್ ಆ್ಯಂಡ್ ಮಿಲಿಂಡಾ ಗೇಟ್ಸ್ ಫೌಂಡೇಶನ್ನ ಟ್ರಸ್ಟಿ ಬಿಲ್ಗೇಟ್ಸ್ ಗುರುವಾರ, ಭಾರತವು ತನ್ನ ದೊಡ್ಡ ಭೂಪ್ರದೇಶ ಮತ್ತು ದಟ್ಟವಾದ ಜನಸಂಖ್ಯೆಯಿಂದಾಗಿ ಇಂದು ಭಾರಿ ಆರೋಗ್ಯ ಬಿಕ್ಕಟ್ಟಿನಿಂದ ಬಳಲುತ್ತಿದೆ ಎಂದಿದ್ದು, ಭಾರತದ ಔಷಧ ಉದ್ಯಮದ ಸಾಮರ್ಥ್ಯದ ಕುರಿತು ಮಾತನಾಡಿದ ಅವರು, ಭಾರತವು ಅನೇಕ ಔಷಧೀಯ ಮತ್ತು ಲಸಿಕೆ ಕಂಪನಿಗಳನ್ನು ಹೊಂದಿದ್ದು, ವಿಶ್ವದಾದ್ಯಂತ ಔಷಧಿಗಳನ್ನು ಪೂರೈಸಬಹುದಾದ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












