ಬಾಹ್ಯಾಕಾಶದಿಂದ ಭಾರತ ಅತಿ ಸುಂದರವಾಗಿ ಕಾಣುತ್ತದೆ; ಸುನೀತಾ ವಿಲಿಯಮ್ಸ್ ಅನುಭವ

0
436

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಬಾಹ್ಯಾಕಾಶದಿಂದ ನೋಡಿದರೆ ಭಾರತ ದೂರದಲ್ಲಿರುವ ಮನೆಯನ್ನು ನೋಡಿದ ಅನುಭವವನ್ನು ನೀಡುತ್ತದೆ ಎಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 286 ದಿನಗಳ ನಂತರ ಹಿಂದಿರುಗಿದ ಸುನೀತಾ ವಿಲಿಯಮ್ಸ್ ಹೇಳಿದ್ದಾರೆ. ಹಿಮಾಲಯ ಮತ್ತು ಮುಂಬೈ ವಿಶೇಷವಾಗಿ ಸುಂದರವಾಗಿ ಕಾಣುತ್ತವೆ ಎಂದು ಅವರು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀತಾ, “ಭಾರತ ತುಂಬಾ ಸುಂದರವಾಗಿದೆ. ಹಿಮಾಲಯದ ಮೇಲೆ ಹೋದಾಗಲೆಲ್ಲಾ ಬುಚ್ ವಿಲ್ಮೋರ್ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು,” ಎಂದರು. ಬಾಹ್ಯಾಕಾಶ ನಿಲ್ದಾಣದಿಂದ ಕಂಡ ಭೂದೃಶ್ಯಗಳ ವೈವಿಧ್ಯಮಯ ಬಣ್ಣಗಳು ನಿಜಕ್ಕೂ ಅಚ್ಚರಿ ಮೂಡಿಸುವಂತಿದ್ದವು. ಪೂರ್ವದಿಂದ ಗುಜರಾತ್-ಮುಂಬೈ ಕಡೆಗೆ ಹಾದುಹೋದಾಗ ದಡದಲ್ಲಿ ಮೀನುಗಾರಿಕಾ ದೋಣಿಗಳು ಕಂಡವು, ಅದು ಸ್ವಾಗತಿಸುತಿದ್ದಂತೆ ಅನಿಸಿತು.

ರಾತ್ರಿಯ ಸಮಯದಲ್ಲಿ, ಸಣ್ಣ ಪಟ್ಟಣಗಳು ದೊಡ್ಡ ನಗರಗಳಿಗೆ ಸಂಪರ್ಕಿಸುವ ವಿದ್ಯುತ್ ದೀಪಗಳ ಜಾಲ ಭವ್ಯವಾಗಿ ತೋರುತ್ತದೆ. ಭಾರತಕ್ಕೆ ಇಳಿಯುವ ಹಿಮಾಲಯ ಪರ್ವತಗಳು ಅದ್ಭುತ ದೃಶ್ಯ ನೀಡುತ್ತವೆ. ಶೀಘ್ರದಲ್ಲೇ ಭಾರತಕ್ಕೆ ಬರುವ ಉತ್ಸಾಹವನ್ನು ವ್ಯಕ್ತಪಡಿಸಿದ ಸುನೀತಾ, ತಮ್ಮ ಅನುಭವಗಳನ್ನು ಸಾಧ್ಯವಾದಷ್ಟು ಜನರೊಂದಿಗೆ ಹಂಚಿಕೊಳ್ಳಲು ಆಸಕ್ತಿದ್ದಾರೆ. ಅವರ ಕುಟುಂಬ ಮೂಲಗಳು ಗುಜರಾತ್‌ನಲ್ಲಿವೆ.