ಇಂಡಿಯಾ ಓಐಸಿ ಟ್ರೇಡ್ ಕೌನ್ಸಿಲ್ ಚೇರ್ ಮನ್ ಬಿ.ಎಮ್. ಫಾರೂಕ್ ಅವರು ಶೀಘ್ರ ಅಬುಧಾಬಿಗೆ

0
327

ಸನ್ಮಾರ್ಗ ವಾರ್ತೆ

ಇಂಡಿಯಾ ಓಐಸಿ ಟ್ರೇಡ್ ಕೌನ್ಸಿಲ್ (Organisation of Islamic Countries) ಯ trade Councilನ Honorary ಚೇರ್ ಮನ್ ಆಗಿರುವ ಬಿ.ಎಮ್.ಫಾರೂಕ್ ಅವರು ಮಾರ್ಚ್ 27ರಂದು ಅಬುಧಾಬಿಗೆ ಅಲ್ಲಿನ ಸರಕಾರದ (dean of diplomatic corps) ಆಹ್ವಾನದ ಮೇರೆಗೆ ತೆರಳಲಿದ್ದು, ಇಫ್ತಾರ್ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಇಂಡಿಯಾ ಓಐಸಿ ಟ್ರೇಡ್ ಕೌನ್ಸಿಲ್ ನ ಚೇರ್ ಮನ್ ಆಗಿ ಆಯ್ಕೆಯಾದ ಬಳಿಕ ಕಳೆದ ವಾರ ಹಲವು ಆಫ್ರಿಕನ್ ಇಸ್ಲಾಮಿಕ್ ದೇಶಗಳ ಜೊತೆಗೆ ಭಾರತದ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿರುವ ಫಾರೂಕ್ ಅವರು, ಮುಂದಿನ ವಾರಗಳಲ್ಲಿ ದುಬೈ ಮತ್ತು ಬಹರೈನ್ ನ ಸಭೆಗಳಿಗೂ ಆಹ್ವಾನಿತರಾಗಿದ್ದಾರೆ.

ದೆಹಲಿಯ ಕೇಂದ್ರ ಸರಕಾರದ ವಾಣಿಜ್ಯ ಖಾತೆಯ ಕಚೇರಿ ಸಂಕೀರ್ಣದಲ್ಲಿ ಫಾರೂಕ್ ಅವರ ಹೊಸ ಚೇರ್ ಮನ್ ಕಛೇರಿ ಸಿದ್ಧವಾಗುತ್ತಿದೆ.

ಜಗತ್ತಿನ 57 ಇಸ್ಲಾಮಿಕ್ ದೇಶಗಳ ಜೊತೆಗೆ ಭಾರತದ ವಾಣಿಜ್ಯ ವೃದ್ಧಿಗೆ ಫಾರೂಕ್ ಅವರು ಹೊಸ ಯೋಜನೆಗಳನ್ನು ಹೊಂದಿದ್ದು, ಶೀಘ್ರದಲ್ಲೇ ಈ ಇಸ್ಲಾಮಿಕ್ ದೇಶಗಳ ರಾಯಭಾರಿಗಳ ಜೊತೆಗೆ ಶೃಂಗಸಭೆ ನಡೆಯಲಿದೆ. ಈ ಎಲ್ಲ ದೇಶಗಳ ಜೊತೆಗೆ ಭಾರತದ ಪರವಾಗಿ ಹೊಸ trade agrrementsಗಳಿಗೆ ಸಹಿ ಹಾಕುವ ಅಧಿಕಾರ India OIC Trade Councilನ Honorary Chairman ಆಗಿರುವ ಫಾರೂಕ್ ಅವರದ್ದಾಗಿದೆ.