ಸನ್ಮಾರ್ಗ ವಾರ್ತೆ
ಕುವೈತ್ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ, ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಯಶಸ್ವಿಯಾಗಿ ತಡೆಹಿಡಿದಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕೃತ ವಕ್ತಾರ ಮೇಜರ್ ಜನರಲ್ ಸೌದ್ ಅಬ್ದುಲ್ ಅಝೀಝ್ ಅಲ್-ಒಟೈಬಿ ಪ್ರಕಟಿಸಿದ್ದಾರೆ. ದೇಶದಲ್ಲಿ ಕೇಳಿಸಿದ ಸ್ಫೋಟಗಳು ವೈಮಾನಿಕ ದಾಳಿಗಳಿಂದ ಉಂಟಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕುವೈತ್ನಲ್ಲಿರುವ ಸರ್ಕಾರಿ ಸೌಲಭ್ಯ ಹಾಗೂ ಬುಬಿಯಾನ್ ದ್ವೀಪದ ನಾಗರಿಕ ವಾಹನಗಳ ಮೇಲಿನ ದಾಳಿಯಿಂದ ಸಣ್ಣಪುಟ್ಟ ಹಾನಿಯಾಗಿದೆ ವಿನಃ, ಯಾವುದೇ ಸಾವುನೋವುಗಳು ಅಥವಾ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ದೇಶದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ರಕ್ಷಿಸಲು ಸಶಸ್ತ್ರ ಪಡೆಗಳು ಸಂಪೂರ್ಣ ಎಚ್ಚರಿಕೆ ವಹಿಸಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಭದ್ರತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.












