ಸನ್ಮಾರ್ಗ ವಾರ್ತೆ
ಗಾಝ: ಗಾಝ ಪಟ್ಟಿಯ ವಿವಿಧ ಭಾಗಗಳಲ್ಲಿ ಇಂದು ಬೆಳಿಗ್ಗೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 29 ಪ್ಯಾಲೆಸ್ತೀನಿಯ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಮೂಲಗಳು ವರದಿ ಮಾಡಿವೆ.
ಇಸ್ರೇಲ್ ನೆರವು ವಿತರಣಾ ಕೇಂದ್ರದ ಸುತ್ತಮುತ್ತ ಆಹಾರಕ್ಕಾಗಿ ಕಾಯುತ್ತಿದ್ದ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 10 ಜನರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
2023ರ ಅಕ್ಟೋಬರ್‌ನಿಂದ ಇಸ್ರೇಲಿ ದಾಳಿಗಳಲ್ಲಿ ಗಾಝ ಭಾಗದಲ್ಲಿ ಸಾವನ್ನಪ್ಪಿದ ಪ್ಯಾಲೆಸ್ತೀನಿಯರ ಸಂಖ್ಯೆ ಈಗಾಗಲೇ 56,600 ಕ್ಕೂ ಮೀರಿದೆ.
ಗಾಝದ ಎನ್‌ಕ್ಲೇವ್‌ನಲ್ಲಿ 60 ದಿನಗಳ ಕಾಲ ಕದನ ವಿರಾಮ ಜಾರಿಗೊಳಿಸಲು ಇಸ್ರೇಲ್ ಕೆಲವು ‘ಅಗತ್ಯ ಷರತ್ತುಗಳಿಗೆ’ ಒಪ್ಪಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದಾರೆ. ಹಮಾಸ್ ಈ ಒಪ್ಪಂದಕ್ಕೆ ಒಪ್ಪಬೇಕೆಂದು ಅವರು ಕರೆ ನೀಡಿದ್ದಾರೆ.












