ಲೆಬನಾನ್‌ ರಾಜಧಾನಿ ಬೈರೂತ್‌ ಮೇಲೆ ಇಸ್ರೇಲ್‌ ದಾಳಿ

0
156

ಸನ್ಮಾರ್ಗ ವಾರ್ತೆ

ಬೈರೂತ್‌: ಇಸ್ರೇಲ್‌ ಸೇನೆಯು ರಾಜಧಾನಿ ಬೈರೂತ್‌ ಒಳಗೊಂಡಂತೆ ಲೆಬನಾನ್‌ ಮೇಲೆ ದಾಳಿ ಮಾಡಿದೆ. ಇರಾನ್‌ ಬೆಂಬಲಿತ ಹಿಝ್ಬುಲ್ಲಾಹ್‌ ಸಂಘಟನೆಯು ಇಸ್ರೇಲ್‌ ಮೇಲೆ ಮಾಡಿರುವ ರಾಕೆಟ್‌ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿ ಮಾಡಲಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಅಯಾತುಲ್ಲಾಹ್‌ ಖಾಮ್ನೆಯಿಯ ರಕ್ತದ ಪ್ರತೀಕಾರವಾಗಿ ಹಾಗೂ ಲೆಬನಾನ್‌ ಮತ್ತು ಲೆಬನಾನಿಗರ ರಕ್ಷಣೆಗಾಗಿ, ಇಸ್ರೇಲ್‌ ನಿರಂತರ ಮಾಡುತ್ತಿರುವ ದಾಳಿಗೆ ಪ್ರತಿಯಾಗಿ ರಾಕೆಟ್‌ಗಳು ಮತ್ತು ಡ್ರೋನ್‌ ದಾಳಿಗಳನ್ನು ನಡೆಸಿರುವುದಾಗಿ ಹಿಝ್ಬುಲ್ಲಾಹ್‌ ಹೇಳಿಕೊಂಡಿದೆ.

ಒಂದು ವರ್ಷದ ವರೆಗಿನ ದೀರ್ಘ ಯುದ್ಧದ ನಡೆದು ಎರಡೂ ಭಾಗದ ನಡುವೆ ನವೆಂಬರ್‌ 2024 ರಂದು ಯುದ್ಧ ವಿರಾಮ ಒಪ್ಪಂದ ನಡೆದಿತ್ತು. ನಂತರ ಇಸ್ರೇಲ್‌ ನಿರಂತರವಾಗಿ ಲೆಬನಾನ್‌ ಮೇಲೆ ದಾಳಿಯನ್ನು ಮುಂದುವರಿಸಿದ್ದು, ಉಗ್ರಗಾಮಿ ಸಂಘಟನೆಯನ್ನು ಗುರಿ ಮಾಡುತ್ತಿರುವುದಾಗಿ ಹೇಳಿಕೊಂಡಿತ್ತು. ಶಾಂತಿ ಒಪ್ಪಂದದ ನಂತರ ಇದೇ ಮೊದಲ ದಾಳಿಯನ್ನು ಹಿಝ್ಭುಲ್ಲಾಹ್‌ ಒಪ್ಪಿಕೊಂಡಿದೆ.