ಇಸ್ರೇಲಿನಲ್ಲಿ ಪ್ರತಿಪಕ್ಷ ಸರಕಾರ: ಬೆಂಜಮಿನ್ ನೆತನ್ಯಾಹು ಹೊರಕ್ಕೆ

0
1114

ಸನ್ಮಾರ್ಗ ವಾರ್ತೆ

ಟೆಲ್ ಅವೀವ್: ಇಸ್ರೇಲಿನಲ್ಲಿ ಹನ್ನೆರಡು ವರ್ಷ ಅಧಿಕಾರದ ಕುರ್ಚಿ ಕಚ್ಚಿ ಹಿಡಿದಿದ್ದ ಬೆಂಜಮಿನ್ ನೆತನ್ಯಾಹು ಅಧಿಕಾರ ವ್ಯಾಪ್ತಿಯಿಂದ ಹೊರಗುಳಿಯುವ ಎಲ್ಲ ಸಾಧ್ಯತೆ ವ್ಯಕ್ತವಾಗಿದೆ. ಅವರನ್ನು ಹೊರಗಿಟ್ಟು ಪ್ರತಿಪಕ್ಷ ಮಂತ್ರಿಸಭೆ ರೂಪಿಸಲಿದ್ದು ಅಧ್ಯಕ್ಷರ ಸರಕಾರ ರಚನೆಗೆ ಕೊಟ್ಟ ಸಮಯ ಅವಕಾಶ ಇಂದಿಗೆ ಕೊನೆಗೊಳ್ಳುತ್ತಿದೆ. ಆದರೂ ಯಾಯರ್ ಲಿಪಿಡ್‍ರ ನೇತೃತ್ವದಲ್ಲಿ ಮಿತ್ರ ಪಕ್ಷಗಳ ಸಚಿವ ಸಂಪುಟ ರಚನೆಯಾಗಲಿದೆ ಎಂದು ಮೂಲಗಳು ಹೇಳಿದ್ದವು. ಆದರೆ ಇದುವರೆಗೂ ಅವರು ಅಧ್ಯಕ್ಷರನ್ನು ಭೇಟಿಯಾಗಲು ಸಮಯ ಕೇಳಿಲ್ಲ.

ಇಂದು ಮಧ್ಯರಾತ್ರಿಯೊಳಗೆ ಅಧ್ಯಕ್ಷರನ್ನು ಭೇಟಿಯಾಗದಿದ್ದರೆ ನೆತನ್ಯಾಹು ಪುನಃ ಅಧಿಕಾರದಲ್ಲಿ ಕೂರುವುದಕ್ಕೆ ಅವಕಾಶವಾಗಲಿದೆ. ದೇಶ ಎರಡು ವರ್ಷಗಳಲ್ಲಿ ಐದನೇ ಬಾರಿ ಚುನಾವಣೆಯೆಡೆಗೆ ತೆರಳಬೇಕಾಗುತ್ತದೆ.

ಹೊಸ ಒಪ್ಪಂದ ಪ್ರಕಾರ ನೆತನ್ಯಾಹು ಮೈತ್ರಿ ಸರಕಾರದಲ್ಲಿದ್ದ ನಾಫ್ಟಲಿ ಬೆನಟ್ ಲಿಪಿಡ್ ಸರಕಾರದ ಮೊದಲ ಅವಧಿಯ ಪ್ರಧಾನಿಯಾಗಲಿದ್ದಾರೆ. ಎರಡು ವರ್ಷ ಅಥವಾ ನಾಲ್ಕು ವರ್ಷ ಇವರ ಕಾಲಾವಧಿಯಾಗಲಿದೆ. ಇದಾದ ಬಳಿಕ ಲಿಪುಡ್‍ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. 120 ಸದಸ್ಯರ ಪಾರ್ಲಿಮೆಂಟಿನಲ್ಲಿ ಸರಕಾರ ರಚಿಸಲು 61 ಸದಸ್ಯರ ಬೆಂಬಲದ ಅಗತ್ಯವಿದೆ.