ಸಾಧನೆಯ ಹಾದಿಯಲ್ಲಿ ಸಾಗಿ ಇಸ್ರೋ ವಿಜ್ಞಾನಿಯಾದ ಸನಾ ಅಲಿ

0
437

ಸನ್ಮಾರ್ಗ ವಾರ್ತೆ

ಹೈದರಾಬಾದ್: ಸನಾ  ಅಲಿ ಎಂಬ ಬಡ ಕುಟುಂಬದಿಂದ ಬಂದ ಯುವತಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ತಂತ್ರಜ್ಞಾನ ಎಂಜಿನಿಯರ್ ವಿಭಾಗದ ಸಹಾಯಕ ವಿಜ್ಞಾನಿಯಾಗಿ ಸೇರ್ಪಡೆಯಾಗಿದ್ದಾರೆ. ಇವರ ತಂದೆ ಬಸ್ ಚಾಲಕರಾಗಿದ್ದಾರೆ.

” ಎಲ್ಲ ಹೆಣ್ಣುಮಕ್ಕಳೂ ಯಾವುದೇ ಸಮಸ್ಯೆಯನ್ನು ಪರಿಗಣಿಸದೆ ನಿಮ್ಮ ಶಿಕ್ಷಣ ಮುಗಿಸುವ ಗುರಿಯನ್ನು ಮಾತ್ರ ಹೊಂದಿರಿ” ಎಂದು ಸನಾ ಅಲಿ ಹೇಳಿದ್ದಾರೆ. .ಮಧ್ಯಪ್ರದೇಶದ ವಿಧಿಶಾ ಜಿಲ್ಲೆಗೆ ಸೇರಿದ ಸನಾ ಅಲಿಯವರು ಇಸ್ರೋದ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಹೊಸ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಸ್ಪಷ್ಟ ಗುರಿಯೊಡನೆ, ನಂಬಿಕೆಯೊಡನೆ ಕಲಿಕೆ ಮತ್ತು ಕಠಿಣ ದುಡಿಮೆಯಲ್ಲಿ ತೊಡಗಿಕೊಂಡು ಸ್ಪಷ್ಟ ಅರ್ಹತೆಯೊಡನೆ ಸನಾ ಈ ಹುದ್ದೆಗೆ ಏರಿದ್ದಾರೆ.
ಸನಾ ವಿಧಿಶಾದ ಸತಿ-ಸ್ಮಾರ್ಟ್ ಅಶೋಕ್ ಟೆಕ್ನಿಕಲ್ ಇನ್ ಸ್ಟಿಟ್ಯೂಟಿನಲ್ಲಿ ಬಿ.ಟೆಕ್. ಮತ್ತು ಎಂ. ಟೆಕ್. ಪದವಿಗಳನ್ನು ಪಡೆದಿದ್ದಾರೆ. ತಂದೆಯ ಕಡಿಮೆ ಆದಾಯದ ಕಾರಣಕ್ಕೆ ಓದು ಮುಗಿಸಲು ಸನಾ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.
ಸನಾರ ತಾಯಿ ಮಗಳ ಓದಿಗಾಗಿ ತನ್ನ ಆಭರಣಗಳನ್ನೆಲ್ಲ ಅಡವಿಟ್ಟರೆ, ತಂದೆ ಸಯೀದ್ ಸಾಜಿದ್ ಅಲಿಯವರು ಮಗಳ ಓದಿಗಾಗಿ ಸಾಕಷ್ಟು ಸಾಲ ಮಾಡಿದ್ದಾರೆ.

ಸನಾ ಯುವ ವಿಜ್ಞಾನಿಯಾಗಿ ಆಯ್ಕೆಯಾದ ಮೇಲೆ ಅವರು ಪ್ರತಿಕ್ರಿಯಿಸುತ್ತಾ, “ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವಳು. ನಾನು ಎಲ್ಲ ಹೆಣ್ಣುಮಕ್ಕಳಿಗೂ ನೀಡುವ ಸಂದೇಶವೆಂದರೆ ಯಾವುದೇ ಸಮಸ್ಯೆಯನ್ನು ಪರಿಗಣಿಸದೆ ನಿಮ್ಮ ಶಿಕ್ಷಣ ಮುಗಿಸುವ ಗುರಿಯನ್ನು ಮಾತ್ರ ಹೊಂದಿರಿ. ನೀವಿದಕ್ಕೆ ಎಲ್ಲ ಬಗೆಯ ಪ್ರಯತ್ನ ಮತ್ತು ಸ್ಪಷ್ಟ ಗುರಿ ಸಾಧನೆಯ ಕಣ್ಣೋಟ ಹೊಂದಿರಬೇಕು.” ಎಂದು ಇತರರಿಗೆ ಸ್ಪೂರ್ತಿಯುತ ಮಾತುಗಳನ್ನಾಡಿದರು.