ಪ್ರವಾದಿ ದಿನಾಚರಣೆ ವೇಳೆ ಜೈ ಶ್ರೀರಾಮ್ ಘೋಷಣೆ: ಆರು ಮಂದಿ ಬಂಧನ

0
8931

ಸನ್ಮಾರ್ಗ ವಾರ್ತೆ

ಹೈದರಾಬಾದ್, ಅ.2: ನಗರದಲ್ಲಿ ಎರಡು ಕಡೆ ಪ್ರವಾದಿ ದಿನಾಚರಣೆ ಮೆರವಣಿಗೆ ಹೋಗುವಾಗ ಜೈ ಶ್ರೀರಾಮ್ ಘೋಷಣೆ ಕೂಗಿ ಗಲಾಟೆ ಸೃಷ್ಟಿಸಿದ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ರವಿವಾರ ಸಿಯಾಗುಡ ಹುಸೈನಿ ಆಲಮ್‍ನಲ್ಲಿ ಮೆರವಣಿಗೆ ಹೊಗುವಾಗ ಘಟನೆ ನಡೆದಿದ್ದು ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ.

ಅಸಿಯಾಗುಡದಲ್ಲಿ ಪ್ರವಾದಿ ದಿನ ಕಾರ್ಯಕ್ರಮದಲ್ಲಿ ಗಲಾಟೆಗೆ ಯತ್ನಿಸಿದ ಹಲವು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಟಾಸ್ಕ್ ಪೋರ್ಸ್ಸ್, ಕುಲ್ಸೂಂ ಪುರ ಪೊಲೀಸರು ಸೇರಿ ಯುವಕರ ಮನೆಗಳಿಗೆ ದಾಳಿ ನಡೆಸಿದೆ. ಘಟನೆಯ ವೀಡಿಯೊ ದೃಶ್ಯ ಪರಿಶೀಲಿಸಿ ಕುಲ್ಸೂಂಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈಗ ಆರು ಮಂದಿಯನ್ನು ಬಂಧಿಸಲಾಗಿದೆ.

ಸಿಯಾಗುಡದಲ್ಲಿ ಪ್ರವಾದಿ ದಿನಾಚರಣೆ ಮೆರವಣಿಗೆ ನಡೆಯುವಾಗ ಒಂದು ತಂಡ ಉದ್ವಿಗ್ನತೆ ಸೃಷ್ಟಿಸಲು ನೋಡಿದ್ದು ಬೈಕ್ ರ್ಯಾಲಿ ಹೋಗುತ್ತಿದ್ದಾಗ ಕುಲ್ಸೂಂ ಪುರ ರಸ್ತೆಗೆ ಬಂದಾಗ ಅಲ್ಲಿ  ಜನರು ಜೈಶ್ರೀರಾಂ ಎಂದು ಕೂಗಿದರು. ಕೈಯಲ್ಲಿ ಕೇಸರಿ ಪತಾಕೆ ಹೊಂದಿದ್ದ ಈ ತಂಡ ಉದ್ವಿಗ್ನತೆ ಸೃಷ್ಟಿಸಲು ಕೂಗು ಹಾಕಿದರೂ ಮೆರವಣಿಗೆಯಲ್ಲಿದ್ದವರು ಸಂಯಮ ಪಾಲಿಸಿದ್ದಾರೆ.

ಹುಸೈನ್ ಆಲಮಿನಲ್ಲಿ ಪ್ರವಾದಿ ದಿನಾಚರಣೆಯ ನಡುವೆ ಗೊಲ್ಲ ಖಿಡ್ಕಿಯಲ್ಲಿ ದೇವಸ್ಥಾನದ ಮುಂದೆ ಇದ್ದ ಹೂಕುಂಡವನ್ನು ಮೆರವಣಿಗೆಯಲ್ಲಿದ್ದವರು ಒಡೆದು ಹಾಕಿದರೆಂದು ಇನ್ನೊಂದು ವಿಭಾಗದವರು ಆರೋಪಿಸಿದೆ. ಪೊಲೀಸರು ಸರಿಯಾಗಿ ಬಂದೋಬಸ್ತು ಮಾಡದಿರುವುದರಿಂದ ಈ ಘಟನೆಗಳಿಗೆ ಕಾರಣವಾಯಿತು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.