ಬಿಹಾರದಲ್ಲಿ ಶೇ 63 ರಷ್ಟು ಹಿಂದುಳಿದ ವಿಭಾಗಗಳು; ಜಾತಿ ಜನಗಣತಿ ಬಹಿರಂಗ

0
1278

ಸನ್ಮಾರ್ಗ ವಾರ್ತೆ

ಪಾಟ್ನ,: ಬಿಹಾರದ ಜಾತಿ ಜನಗಣತಿ ರಾಜ್ಯ ಸರಕಾರ ಹೊರಬಿಟ್ಟಿದೆ. ಜನಸಂಖ್ಯೆಯಲ್ಲಿ ಶೇ. 36.01 ಅತ್ಯಂತ ಹಿಂದುಳಿದವರು. 27.12 ಪರ್ಸೆಂಟು ಹಿಂದುಳಿದ ವಿಭಾಗದವರು ಎಂದು ವರದಿಯು ತಿಳಿಸುತ್ತಿದೆ. 19.7 ಪರ್ಸೆಂಟ್ ಪರಿಶಿಷ್ಟ ಜಾತಿಯವರು. 1.68 ಪರ್ಸೆಂಟು ಪರಿಶಿಷ್ಟ ವರ್ಗದವರು. 15.52 ಪರ್ಸೆಂಟು ಮೇಲ್ವರ್ಗ ವಿಭಾಗದವರು ಇದ್ದಾರೆ ಎಂದು ಸರಕಾರ ಹೊರಬಿಟ್ಟಿರುವ ಜಾತಿ ಜನಗಣತಿ ಸೂಚಿಸುತ್ತಿದೆ.

ಬಿಹಾರ ಎಂಬ ಒಂದು ರಾಜ್ಯದಲ್ಲಿ 38 ಜಿಲ್ಲೆಗಳಿವೆ. ಅಲ್ಲಿ ಒಟ್ಟು 13.07 ಕೋಟಿ ಜನರಿದ್ದಾರೆ. ಜನಸಂಖ್ಯೆಯಲ್ಲಿ 63.12 ಪರ್ಸೆಂಟು ಅತ್ಯಂತ ಹಿಂದುಳಿದವರಾಗಿದ್ದಾರೆ. ಇವರೆಲ್ಲಾ ಒಬಿಸಿ ವಿಭಾಗದವರು. ಇವರಲ್ಲಿ 14. 27 ಶೇಕಡ ಯಾದವರು. ಭೂಮಿಹಾರ್ ವಿಭಾಗದವರು 2.86 ಪರ್ಸೆಂಟು . ಬ್ರಾಹಣರ ಸಂಖ್ಯೆ 3.66 ಶೇಕಡ ಆಗಿದೆ. ಮುಶಾಹರ್ ವಿಭಾಗದವರು ಶೇ 3ರಷ್ಟಿದ್ದು ಜಾತಿ ಜನಗಣತಿ ಜನರು ಯಾವ ಯಾವ ವಿಭಾಗಕ್ಕೆ ಸೇರಿದವರೆಂದು ಜನರ ಮುಂದೆ ಬಹಿರಂಗ ಪಡಿಸಿದೆ.

ರಾಜ್ಯದಲ್ಲಿ ಹಿಂದೂ ಧರ್ಮದ ಪ್ರಮಾಣ ಶೇ.81.9986. ಉಳಿದ ಸಮುದಾಯದ ಅಂಕಿ ಅಂಶಗಳು ಮುಸ್ಲಿಮ್ 17.70 ಪ್ರತಿಶತ, ಕ್ರಿಶ್ಚಿಯನ್ನರು -.0576, ಸಿಖ್ಖರು 0.0113, ಬೌದ್ಧರು 0.0851 ಮತ್ತು ಜೈನರು 0.0096 ಪ್ರತಿಶತ.

OBC ಮೀಸಲಾತಿಯನ್ನು ಶೇಕಡಾ 27 ಕ್ಕೆ ಏರಿಸುವುದು ಸೇರಿದಂತೆ ಜಾತಿ ಜನಗಣತಿಯ ಅನುಸರಣೆ ಮಿತ್ರಪಕ್ಷಗಳೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಜನಗಣತಿ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ ಮತ್ತು ಬಡವರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿತೀಶ್ ಕುಮಾರ್ ಹೇಳಿದರು.

ಬಿಹಾರ ಸರ್ಕಾರವು ಎರಡು ಹಂತದ ಜನಗಣತಿಯನ್ನು ಜನವರಿ 7 ರಂದು ಪ್ರಾರಂಭಿಸಿತು. ಜಾತಿ ಗಣತಿಯೊಂದಿಗೆ ಪ್ರತಿ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನೂ ದಾಖಲಿಸಲಾಗಿದೆ.