ಮಾನ್ವಿ: ಜಮಾಅತೆ ಇಸ್ಲಾಮೀ‌ ಹಿಂದ್ ಸದಸ್ಯ ಚಂದಾ ಹುಸೇನ್ ಸಾಹೇಬ್ ನಿಧನ

0
759

ಸನ್ಮಾರ್ಗ ವಾರ್ತೆ

ರಾಯಚೂರು: ಜಿಲ್ಲೆಯ ಮಾನ್ವಿ ನಗರದ ಜಮಾಅತೇ ಇಸ್ಲಾಮೀ ಹಿಂದ್ ಸಕ್ರಿಯ ಸದಸ್ಯರಾದ ಜೆ. ಚೆಂದಾಹುಸೇನ್ ಸಾಹೇಬ್ ಅವರು ಗುರುವಾರ ಮಧ್ಯರಾತ್ರಿ 2:30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಸಾಮಾಜಿಕ – ಧಾರ್ಮಿಕ ಸೌಹಾರ್ದ ಸಂಘಟನಾ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದ ಇವರು, ಸರಳ ಜೀವನ ಹಾಗೂ ಸದಾ ಲವಲವಿಕೆಯ ವ್ಯಕ್ತಿತ್ವ ಹೊಂದಿದ್ದರು.

ಮೃತರು ತಾಯಿ, ಪತ್ನಿ, ನಾಲ್ಕು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಲ್ಲಾಹನು ಅವರ ಎಲ್ಲಾ ಸತ್ಕರ್ಮಗಳನ್ನು ಸ್ವೀಕರಿಸಲಿ ಮತ್ತು ಅವರಿಗೆ ಜನ್ನಾತುಲ್ ಫಿರ್ದೌಸ್ ದಯಪಾಲಿಸಲಿ. ಅವರ ಕುಟುಂಬಕ್ಕೆ ಸಹನೆ ನೀಡಿ ಅನುಗ್ರಹಿಸಲಿ ಎಂದು ಜಮಾಅತೆ ಇಸ್ಲಾಮೀ‌ ಹಿಂದ್ ಸಂತಾಪ ಸೂಚಿಸಿದೆ.

ಮೃತರ ಜನಾಝಾ ನಮಾಝನ್ನು ಮಧ್ಯಾಹ್ನದ ಬಳಿಕ ನಗರದ ಜಾಮೀಯಾ ಮಸ್ಜಿದ್ ಹತ್ತಿರದ ಆಶರ್ ಖಾನ ಕಟ್ಟೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.