ಪೌರತ್ವ ಕಾನೂನು: ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ ಬ್ರಿಟಿಷ್ ಕಮೆಡಿಯನ್; ಹತ್ತು ಸಾವಿರಕ್ಕೂ ಹೆಚ್ಚು ರಿ ಟ್ವೀಟ್

0
2490

ಸನ್ಮಾರ್ಗ ವಾರ್ತೆ

ದಿಲ್ಲಿ, ಫೆ. 25: ಪೌರತ್ವ ತಿದ್ದುಪಡಿ ಕಾನೂನು ಕುರಿತು ಬ್ರಿಟಿಷ್ ಕಮೆಡಿಯನ್ ಜೋನ್ ಒಲಿವರ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯ ಮಾಡಿದ್ದಾರೆ. ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ ಅವರ ಸಕಾಲಿಕ ಘಟನೆಗಳ ಕುರಿತು ವೀಡಿಯೊದಲ್ಲಿ ಸಿಎಎಯ ವಿರುದ್ಧ ಟೀಕೆ ಮಾಡಿದ್ದಾರೆ. ಹದಿನೆಂಟು ನಿಮಿಷಗಳ ಸಿಎಎಯ ಕುರಿತ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಮುಸ್ಲಿಂ ವಿರೋಧಿಯಾಗಿದೆ. ಪ್ರತಿಭಟನಾಕಾರ ಮೇಲಿನ ದಾಳಿಯನ್ನೂ ಅವರು ಚರ್ಚಿಸಿದ್ದಾರೆ. ಮೋದಿ ಅವರ ಪಾರ್ಟಿ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳಲು ಪೈಶಾಚಿಕವಾದ ಈ ಕ್ರಮವನ್ನು ವಿವಿಧ ಹಂತಗಳಿಂದ ಅವರು ಜಾರಿಗೊಳಿಸುತ್ತಿದ್ದಾರೆ ಎಂದು ಒಲಿವರ್ ಹೇಳಿದ್ದಾರೆ.

ಸಿಎಎ ಮುಸ್ಲಿಮರನ್ನು ಮಾತ್ರವಲ್ಲ ಬಹಳಷ್ಟು ಬಡವರನ್ನು ಬಾಧಿಸಲಿದೆ ಎಂದಿದ್ದು ಅವರ ವೀಡಿಯೊ ಟ್ವಿಟರ್ ನಲ್ಲಿ ಅಲೆಯೆಬ್ಬಿಸಿದೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ರಿ ಟ್ವೀಟ್ ಮಾಡಿದ್ದಾರೆ. ಸ್ವರ ಭಾಸ್ಕರ್, ಅನುರಾಗ್ ಕಶ್ಯಪ್ ವೀಡಿಯೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.