ಸನ್ಮಾರ್ಗ ವಾರ್ತೆ
ಅಝಂಗಡ,ಸೆ.11: ಉತ್ತರ ಪ್ರದೇಶದ ಅಝಂಗಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ಶಾಲೆಯ ನೆಲ ತೊಳಸುವ ಚಿತ್ರ ತೆಗೆದ ಸಂತೋಷ್ ಜೈಸ್ವಾಲ್ ಎಂಬ ಪತ್ರಕರ್ತನನ್ನು ಬಂಧಿಸಲಾಗಿದೆ. ಜೈಸ್ವಾಲ್ ವಿರುದ್ಧ ಸರಕಾರಿ ಅಧಿಕಾರಿಗಳ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ ಆರೋಪ ಹೊರಿಸಲಾಗಿದೆ. ಸಂತೋಶ್ ಜೈಸ್ವಾಲ್ ಬಂಧನದ ವಿರುದ್ಧ ಇತರ ಪತ್ರಕರ್ತರು ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಪಿ.ಸಿಂಗ್ ದೂರು ನೀಡಿದ್ದು ಅವರು ತನಿಖೆಗೆ ಆದೇಶಿಸಿದ್ದಾರೆ.
ಊದ್ಪುರಿ ಪ್ರಾಥಮಿಕ ಶಾಲೆ ಮಕ್ಕಳಿಂದ ನೆಲ ತೊಳೆಸುವ ಚಿತ್ರ ಜೈಸ್ವಾಲ್ ಸೆರೆ ಹಿಡಿದಿದ್ದರು. ಇದನ್ನು ಗಮನಕ್ಕೆ ತಂದ ಬಳಿಕ ಶಾಲೆಗೆ ಬಂದ ಪೊಲೀಸರು ಜೈಸ್ವಾಲ್ ಮತ್ತು ಪ್ರಿನ್ಸಿಪಾಲ್ ರಾಧೇಶ್ಯಾಮ ಯಾದವ್ರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ಪ್ರಿನ್ಸಿಪಾಲ್ ದೂರಿನಲ್ಲಿ ಪತ್ರಕರ್ತನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಆಗಾಗ ಶಾಲೆಗೆ ಬರುವ ಜೈಸ್ವಾಲ್ ತನ್ನ ಪೇಪರ್ ಖರೀದಿಸುವಂತೆ ಅಧ್ಯಾಪಕರನ್ನು ಹಾೂ ವಿದ್ಯಾರ್ಥಿಗಳನ್ನು ನಿರ್ಬಂಧಿಸುತ್ತಿದ್ದ, ನಿರಾಕರಿಸಿದರೆ ಕೆಟ್ಟದಾಗಿ ವರ್ತಿಸುತ್ತಿದ್ದ ಎಂದು ಪ್ರಿನ್ಸಿಪಾಲ್ ದೂರಿನಲ್ಲಿ ತಿಳಿಸಿದ್ದರು.












