ಇದು ಕೊಲೆ ಕೃತ್ಯವಲ್ಲ; ಬಂಧಿಸಲಾದ ಪತ್ರಕರ್ತನನ್ನು ಬಿಡುಗಡೆಗೊಳಿಸಿ -ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟು ಆದೇಶ: ಯೋಗಿಗೆ ಮುಖಭಂಗ

0
646

ಹೊಸದಿಲ್ಲಿ, ಜೂ.11: ಯೋಗಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ವೀಡಿಯೊ ಶೇರ್ ಮಾಡಿದ್ದಾರೆಂದು ಆರೋಪಿಸಿ ಬಂಧಿಸಲಾದ ಪತ್ರಕರ್ತ ಪ್ರಶಾಂತ್ ಕನೂಜಿಯರನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂಕೋರ್ಟು ಆದೇಶಿಸಿದೆ. ಪ್ರಶಾಂತ್ ಕನೂಜಿಯರ ಪತ್ನಿ ನೀಡಿದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಕೋರ್ಟು ಸರಕಾರಕ್ಕೆ ಈ ಆದೇಶ ಹೊರಡಿಸಿದೆ.

ಉತ್ತರಪ್ರದೇಶ ಸರಕಾರವನ್ನು ಕಟು ಭಾಷೆಯಲ್ಲಿ ತರಾಟೆಗೆತ್ತಿಕೊಂಡ ಕೋರ್ಟು, ಇದು ಕೊಲೆ ಪ್ರಕರಣವಲ್ಲ. ಪತ್ರಕರ್ತನನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆದೇಶಿಸಿತು. ಉತ್ತರಪ್ರದೇಶ ಪೊಲೀಸರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹನನವಾಗಿದೆ. ಟ್ವೀಟ್‍ನಲ್ಲಿ ಸಮಸ್ಯೆಯಿರಬಹುದು. ಆದರೆ ಯಾವ ಆಧಾರದಲ್ಲಿ ಪತ್ರಕರ್ತನನ್ನು ಬಂಧಿಸಲಾಯಿತು ಎಂದು ಕೋರ್ಟು ಪ್ರಶ್ನಿಸಿತು. ಜಗೀಶ್ ಅರೋರ ಬಂಧನ ಕಾನೂನು ವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಬೆಟ್ಟು ಮಾಡಿ ಕನೂಜಿಯರ ಪತ್ನಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಯೋಗಿಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ವಾರ್ತಾ ಚ್ಯಾನಲ್ ಮುಖ್ಯಸ್ಥ ಇಷಿಕ ಸಿಂಗ್, ಸಂಪಾದಕ ಅನೂಜ್ ಶುಕ್ಲರನ್ನು ಕೂಡ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.