‘ಬ್ಯಾಕ್ ಬೆಂಚರ್’ ಹೇಳಿಕೆ: ರಾಹುಲ್‍ ಗಾಂಧಿಗೆ ಪ್ರತ್ಯುತ್ತರ ನೀಡಿದ ಜ್ಯೋತಿರಾದಿತ್ಯ ಸಿಂಧಿಯಾ

0
471

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಿಜೆಪಿಯಲ್ಲಿ ಬ್ಯಾಕ್ ಬೆಂಚರ್ ಆಗಿಬಿಟ್ಟಿದ್ದಾರೆ. ಕಾಂಗ್ರೆಸ್ಸಿನಲ್ಲಿರುತ್ತಿದ್ದರೆ ಅವರಿಗೆ ಮುಖ್ಯಮಂತ್ರಿ ಆಗಬಹುದಿತ್ತು ಎಂದು ಜ್ಯೋತಿರಾದಿತ್ಯ ಸಿಂಧಿಯಾರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದು ಇದಕ್ಕೆ ಜ್ಯೋತಿರಾದಿತ್ಯ ಸಿಂಧ್ಯ ಉತ್ತರಿಸಿದ್ದಾರೆ.

ತಾನು ಕಾಂಗ್ರೆಸ್ಸಿನಲ್ಲಿದ್ದಾಗ ರಾಹುಲ್ ಗಾಂಧಿಗೆ ಈ ಅಭಿಪ್ರಾಯ ಯಾಕಿರಲಿಲ್ಲ. ಈಗಿನ ಪರಿಸ್ಥಿತಿ ಬೇರೆ ಆಗಿದೆ ಎಂದು ಸಿಂಧಿಯಾ ಎಎನ್‍ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಸಂಘಟನೆಯ ಪ್ರಾಮುಖ್ಯದ ಕುರಿತು ಪಾರ್ಟಿಯ ಯುವ ವಿಭಾಗದಲ್ಲಿ ಮಾತಾಡುವ ವೇಳೆ ರಾಹುಲ್ ಗಾಂಧಿ, ಸಿಂಧಿಯ ಬಿಜೆಪಿಯಲ್ಲಿ ಒಬ್ಬ ಬ್ಯಾಕ್ ಬೆಂಚರ್ ಆಗಿದ್ದಾರೆ ಎಂದಿದ್ದರು. ಕಾಂಗ್ರೆಸ್‍ನಲ್ಲಿದ್ದಿದ್ದರೆ ಅವರು ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಬಿಜೆಪಿಯಲ್ಲಿ ಒಬ್ಬ ಬ್ಯಾಕ್ ಬೆಂಚರ್ ಆಗಿಬಿಟ್ಟಿದ್ದಾರೆ‌. ಕಾಂಗ್ರೆಸ್ ಕಾರ್ಯಕರ್ತರ ಜೊತೆ ಕೆಲಸ ಮಾಡಿ ಕಾಂಗ್ರೆಸ್ ಅನ್ನು ಬಲಪಡಿಸಿದ್ದರೆ ಸಿಂಧಿಯಾರಿಗೆ ಅವಕಾಶ ಇತ್ತು. ತಾನು ಅವರೊಡನೆ ಹೇಳಿದೆ. ಒಂದು ದಿವಸ ನೀವು ಮುಖ್ಯಮಂತ್ರಿಯಾಗುವಿರಿ ಎಂದು. ಆದರೆ ಅವರು ಬೇರೊಂದು ದಾರಿಯನ್ನು ಆಯ್ಕೆ ಮಾಡಿಕೊಂಡರು ಎಂದು ರಾಹುಲ್ ಹೇಳಿದರು. ಬರೆದಿಡಿ ಅವರು ಒಮ್ಮೆಯೂ ಅಲ್ಲಿ ಮುಖ್ಯ ಮಂತ್ರಿಯಾಗುವುದಿಲ್ಲ. ಆದ್ದರಿಂದ ಅವರು ಇಲ್ಲಿಗೆ ಮರಳಬೇಕಾಗಿದೆ ಎಂದು ರಾಹುಲ್ ಹೇಳಿದರು.

2020 ಮಾರ್ಚ್‌ನಲ್ಲಿ ಮಧ್ಯಪ್ರದೇಶದ ಉನ್ನತ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ಸಿನ ಕಮಲನಾಥ್ ಸರಕಾರವನ್ನು ದೂಡಿ ಹಾಕಿದ್ದರು. ನಂತರ ಅಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು.