ಕಾಶ್ಮೀರವನ್ನು ಕಾಡುತ್ತಿರುವುದು ಪ್ರತ್ಯೇಕತಾವಾದ ಮಾತ್ರವೇ ಅಲ್ಲ

0
786

 

ಮೂಲ: ಕೌ೦ಟರ್ಕರೆಂಟ್ಸ್ ಡಾಟ್ ಕಾಮ್
ಮೊಹಮ್ಮದ್ ಅಶ್ರಫ್

ಕನ್ನಡಕ್ಕೆ: ಆಯಿಷತುಲ್ ಅಫೀಫ

ಕಾಶ್ಮೀರಿಗಳು ಈಗ ನೈಸರ್ಗಿಕ ಮತ್ತು ಮಾನವ-ನಿರ್ಮಿತ ವಿಪತ್ತುಗಳ ಹೊಡೆತಕ್ಕೊಳಗಾಗುತ್ತಿದ್ದಾರೆ. ವಾಸ್ತವವಾಗಿ, ಪ್ರಕೃತಿ ತುಂಬಾ ದಯಾಳು, ಇಡೀ ಸಮಾಜಕ್ಕೆ ದುರಂತವಾಗಿ ಮಾರ್ಪಟ್ಟಿರುವುದು ಮಾನವರು ಮತ್ತು ಅವರ ದುರಾಸೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಆಹಾರ ಕಲಬೆರಕೆಯ ಕುರಿತು ನಡೆಸಿದ ಸಮೀಕ್ಷೆಯ ಬಗ್ಗೆ ಭಾರತೀಯ ಕಾನೂನು ಸಂಸ್ಥೆಯ ನಿಯತಕಾಲಿಕವು ಒಂದು ಲೇಖನವನ್ನು ಪ್ರಕಟಿಸಿದೆ. ಈ ಲೇಖನವು ಸಂಪುಟ 31 ಮಾರ್ಚ್-ಏಪ್ರಿಲ್ 1989 ರ . (ಪುಟಗಳು 91-105)ರಲ್ಲಿದೆ . ಆ ಸಮಯದಲ್ಲಿ ನಡೆಸಿದ ಆಹಾರ ಕಲಬೆರಕೆ ಬಗ್ಗೆ ಸಮೀಕ್ಷೆಯು ನಡುಕ ಹುಟ್ಟಿಸಿತ್ತು ಆಹಾರ ಕಲಬೆರಕೆಯನ್ನು ಪರಿಶೀಲಿಸಲು ಒಂದು ಶಾಸನವಿದೆ. ಹೀಗಿರುವಾಗ ಈ ಕಲಬೆರಕೆದಾರರು ಸಾಧಿಸಿರುವ “ಪ್ರಗತಿ” ಮತ್ತು “ಉತ್ಕೃಷ್ಟತೆ” ಊಹಿಸಿ ! .ಪುರಸಭೆಯ ಆರೋಗ್ಯ ಅಧಿಕಾರಿಯ ಕರ್ತವ್ಯವಾಗಿದೆ ಆಹಾರ ಕಲಬೆರಕೆಯನ್ನು ಪರಿಶೀಲಿಸಿ ಕಾಯಿದೆಯಡಿ ಕ್ರಮ ಕೈಗೊಳ್ಳುವುದು. ಒಬ್ಬರು ಕಲಬೆರಕೆ ಪರೀಕ್ಷಿಸಲು ಕ್ರಮ ತೆಗೆದುಕೊಳ್ಳುವ ಬಗ್ಗೆ ಪುರಸಭಾ ನ್ಯಾಯಾಲಯದಲ್ಲಿ ಕೇಳಿಕೊಳ್ಳಬಹುದು. ವಾಸ್ತವವಾಗಿ, ಕೆಲವು ಪ್ರಮುಖ ಕಂಪನಿಗಳು ಕೂಡಾ ಇದರ ಸೆಳೆತಕ್ಕೊಳಗಾಗಿದೆ. ದುರದೃಷ್ಟವಶಾತ್, ವ್ಯಾಪಕವಾಗಿರುವ ದುರಾಸೆಯಿಂದಾಗಿ, ಆಹಾರ ಕಲಬೆರಕೆಯನ್ನು ಸಂಪೂರ್ಣವಾಗಿ ಪರಿಶೀಲಿಸಲು ಅಸಾಧ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಾಧಿಸಲ್ಪಡುವವರು ಕೊಳೆಗೇರಿ ನಿವಾಸಿಗಳು ಸೇರಿದಂತೆ ಸಮಾಜದ ಕೆಳಮಟ್ಟದ ಜನರು. ಒಬ್ಬ ಮನುಷ್ಯ ತನ್ನ ದುರಾಸೆಯನ್ನು ತಣಿಸಲು ಮತ್ತೊಬ್ಬ ಮನುಷ್ಯನಿಗೆ ವಿಷವುಣ್ಣಿಸುತ್ತಿದ್ದಾನೆ ಎನ್ನುವುದು ಗಾಬರಿಪಡಿಸುತ್ತದೆ.

ಕೆಲವು ದಶಕದ ಹಿಂದೆ ಐವತ್ತರ ದಶಕದ ಪ್ರಾರಂಭದಲ್ಲಿ, ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಹಾಲಿನೊಂದಿಗೆ ನೀರನ್ನು ಸೇರಿಸುತ್ತಿದ್ದರು ಎನ್ನುವುದನ್ನು ಹೊರತುಪಡಿಸಿ ಆಹಾರ ಕಲಬೆರಕೆಯ ಬಗ್ಗೆ ಹೆಚ್ಚಿನದೇನೂ ಕೇಳಿಬರುತಿರಲಿಲ್ಲ. ಅದೂ ಸಹ ಅಪರೂಪವಾಗಿತ್ತು. ಆ ದಿನಗಳಲ್ಲಿ ಮುನ್ಸಿಪಲ್ ಅಧಿಕಾರಿಗಳು ಹಾಲು ನೀರಿನಿಂದ ದುರ್ಬಲಗೊಂಡಿರುವ ಕಾರಣಕ್ಕೆ ಹಾಲಿನ ಹೂಜಿಗಳನ್ನು ಝೀಲಂ ನದಿಗೆ ಸುರಿಯುವ ದ್ರಶ್ಯ ಸಾಮಾನ್ಯವಾಗಿತ್ತು! ಆ ದಿನಗಳಲ್ಲಿ ಆರೋಗ್ಯ ಅಧಿಕಾರಿಗಳು ಈ ಅಪರಾಧಿಗಳಿಗೆ ಒಂದು ದುಃಸ್ವಪ್ನವಾಗಿದ್ದರು! ಈಗ ಸಾಧ್ಯವಿಲ್ಲ! ಏಕೆಂದರೆ ಭ್ರಷ್ಟಾಚಾರ ಕಾಶ್ಮೀರದ ರಕ್ತದಲ್ಲೆ ಪ್ರವಹಿಸಿದೆ. ಜನರಿಗೆ ಉತ್ತಮವಾದದ್ದೇನು ಲಭ್ಯವಾಗಲು ಸಾಧ್ಯವಿಲ್ಲ . ಹಾಲಿಗೆ, ಪುಡಿಮಾಡಿದ ಇಟ್ಟಿಗೆಗಳು, ಧೂಳು ಮತ್ತು ಇತರ ಕೆಲವು ಅಪಾಯಕಾರಿಯಾದ ಮತ್ತು ವಿಷಕಾರಿ ವಸ್ತುಗಳನ್ನು ಕೆಲವು ಮಸಾಲೆಗಳಿಗೆ ಮತ್ತು ಡಿಟರ್ಜೆಂಟ್ ಮತ್ತು ಬ್ಲಾಟಿಂಗ್ ಕಾಗದಗಳನ್ನು ಹಾಲಿಗೆ, ಸೇರಿಸಿಕೊಳ್ಳುವ ನಿದರ್ಶನಗಳಿವೆ. ಬೇಕರಿ ಉತ್ಪನ್ನವನ್ನು ತಯಾರಿಸುವವರು ಕೂಡ ಕೆಲವು ರಾಸಾಯನಿಕಗಳನ್ನ ಬ್ರೆಡ್ ಮತ್ತು ಇತರ ಸಿಹಿತಿಂಡಿಗಳಿಗೆ ಸೇರಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಹಾಲು ಮತ್ತು ಮಸಾಲೆಗಳಂತಹ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುವ ದೊಡ್ಡ ಸಂಸ್ಥೆಗಳ ವಿರುದ್ಧ ಕೆಲವು ಪ್ರಕರಣಗಳು ದಾಖಲಾಗಿವೆ, ಆದರೂ ಸ್ವಲ್ಪ ಸಮಯದ ನಂತರ ಕಂಪನಿಗಳು ಮೊದಲಿನಂತೆಯೇ ಮುಂದುವರೆಯಿತು! ಆ ಮೊಕದ್ದಮೆಗಳು ಏನಾಯಿತೆಂಬುದು ಯಾರಿಗೂ ತಿಳಿದಿಲ್ಲ

ಕಲಬೆರಕೆ ಮಾಡಲಾದ ಆಹಾರ ಉತ್ಪನ್ನಗಳು ಗ್ರಾಹಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ಅವುಗಳಿಗೆ ಚಿಕಿತ್ಸೆ ನೀಡಬೇಕಾಗುತ್ತೆ .ವಿಪರ್ಯಾಸವೇನೆಂದರೆ ಚಿಕಿತ್ಸೆ ರೂಪದಲ್ಲಿ ನೀಡುವ ಔಷಧಿಗಳು ಸಹ ನಕಲಿ ಎಂಬುವುದು! ರಾಜ್ಯದಲ್ಲಿ ನಕಲಿ ಔಷಧಗಳ ಬೃಹತ್ ಜಾಲವೇ ಇದೆ . ಇದಕ್ಕಿಂತ ಹೆಚ್ಚಿನ ಅಪರಾಧವೇನು ಇರಲಾರದು! ಮತ್ತೆ ನಕಲಿ ಔಷಧಿಗಳ ಪ್ರಕರಣಗಳು ಸ್ವಲ್ಪ ಸಮಯದವರೆಗೆ ಇದ್ದವು. 2013ರಲ್ಲಿ ವಿವಿಧ ಆಸ್ಪತ್ರೆಗಳಿಗೆ ಜಮ್ಮು ಮತ್ತು ಕಾಶ್ಮೀರ ವೈದ್ಯಕೀಯ ಸರಬರಾಜು ನಿಗಮದ ಮೂಲಕ ಪೂರೈಕೆಯಾದ ನಕಲಿ ಔಷಧಿಗಳ ಬೃಹತ್ ಹಗರಣವು ಕಂಡುಬಂದಿದೆ. ಕಾಶ್ಮೀರ ಮೂಲದ ಸರ್ಕಾರಿ ಆಸ್ಪತ್ರೆಗಳಿಗೆ ಜೀವ ಉಳಿಸುವ ಔಷಧಿಗಳ ಎರಡು ಪ್ರಮುಖ ಸರಬರಾಜುಗಳು – ಪ್ರತಿಜೀವಕ ಮ್ಯಾಕ್ಸಿಮಿಜೆನ್ -625 ಮತ್ತು ಕ್ಯುರೇಫ್ – ಕೇಂದ್ರೀಯ ಔಷದ ಮಟ್ಟ ನಿಯಂತ್ರಣ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಸ್ಥಳೀಯ ಔಷಧಿ ನಿಯಂತ್ರಣ ಇಲಾಖೆಯಿಂದ ಅನರ್ಹ ಮತ್ತು ಖೋಟಾವೆಂದು ಕಂಡುಬಂದಿದೆ. ಇನ್ನೊಂದೆಡೆ, ಸುಮಾರು ಎರಡು ವರ್ಷಗಳ ಕಾಲ ಸರಬರಾಜು ಮಾಡಿದ ಔಷಧಿಗಳಲ್ಲಿ ಸೀಮೆಸುಣ್ಣ ಮತ್ತು ಜೇಡಿ ಮಣ್ಣು ಮಿಶ್ರಣಗೊಂಡಿದ್ದವು. ವಾಸ್ತವದಲ್ಲಿ ೫೦೦ ಶಿಶುಗಳು ಮೃತಪತ್ತಿರುವುದು ಔಷದಗಳ ಕಲಬೆರಕೆಯಿಂದಾಗಿರಬಹುದು . ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕ ನಕಲಿ ಔಷಧಿಗಳ ಕಾರಣ ಶಿಶುಗಳು ಮೃತಪಟ್ಟಿದ್ದಾರೆ ಎಂದು ಒಪ್ಪಿಕೊಂಡರು. ಪ್ರತಿಜೀವಕಗಳನ್ನು ಒಳಗೊಂಡಂತೆ ಕೆಲವು ಪ್ರಸಿದ್ಧ ಬ್ರಾಂಡ್ಗಳ ಔಷಧಿಗಳು ಜಮ್ಮುವಿನಲ್ಲಿ ನಕಲಿಯಾಗಿವೆ ಮತ್ತು ನಂತರ ವಿವಿಧ ಮಳಿಗೆಗಳ ಮೂಲಕ ಕಣಿವೆಯಲ್ಲಿ ಸರಬರಾಜು ಮಾಡಲ್ಪಟ್ಟಿದೆ.ಅವರು ಕೇವಲ ಅಪರಾಧಿಗಳಲ್ಲ ಕೊಲೆಗಾರರು ಅವರು ಸಾರ್ವಜನಿಕವಾಗಿ ಗಲ್ಲಿಗೇರಿಸಲು ಅರ್ಹರಾಗಿದ್ದಾರೆ.

ದುರದೃಷ್ಟಕರವಾಗಿ ಈ ಅಪರಾಧಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಕಾರ್ಯವಿಧಾನಗಳು ತುಂಬಾ ಉದ್ದವಾಗಿದೆ, ಅವುಗಳು ಅಪರಾಧದಿಂದ ಮುಕ್ತವಾಗುವ ಅವಕಾಶವನ್ನೂ ಹೊಂದಿವೆ. ಈ ಗಂಡಾಂತರವನ್ನು ತೊಡೆದುಹಾಕಲು ಸಂಪೂರ್ಣವಾಗಿ ಕೇವಲ ಸರ್ಕಾರವನ್ನು ಮಾತ್ರ ಅವಲಂಬಿಸಬಾರದು. ಅಪರಾಧಿಗಳ ವಿಚಾರಣೆ ಮತ್ತು ಕಾನೂನು ಕ್ರಮವನ್ನು ಕೈಗೊಳ್ಳಲು ಮಾತ್ರವಲ್ಲ, ಸಮಾಜದಿಂದ ಈ ಅಪರಾಧಿಗಳ ಒಟ್ಟು ಸಾಮಾಜಿಕ ಬಹಿಷ್ಕಾರಕ್ಕೆ ಸಾಮಾಜಿಕ ಜಾಗೃತಿ ಮತ್ತು ಹೋರಾಟದ ಅಗತ್ಯವಿದೆ. ಎಲ್ಲಾ ನಾಗರಿಕ ಹಕ್ಕುಗಳ ಗುಂಪುಗಳು ಈ ಸಮಸ್ಯೆಗಳನ್ನು ಕೈಗೆತ್ತಬೇಕು ಮತ್ತು ಆಹಾರ ಉತ್ಪನ್ನಗಳ ಕಲಬೆರಕೆ ಮಾಡುವ ಮತ್ತು ನಕಲಿ ಔಷಧಿಗಳನ್ನು ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮವನ್ನು ಖಚಿತಪಡಿಸಿಕೊಳ್ಳಬೇಕು. ರಾಜಕೀಯ ನಾಯಕರು ಮಾತ್ರವಲ್ಲದೆ ಎಲ್ಲಾ ಧಾರ್ಮಿಕ ನಾಯಕರು ಸಹ ಆಹಾರ ಕಲಬೆರಕೆ ಮತ್ತು ತಯಾರಿಕೆ ಮತ್ತು ನಕಲಿ ಔಷಧಿಗಳ ಮಾರಾಟದ ವಿರುದ್ಧ ಕ್ರಮ ತೆಗೆದುಕೊಳ್ಳುವ ತುರ್ತು ಅವಶ್ಯಕತೆ ಇದೆ. ಜನರಲ್ಲಿ ಈ ವಿಪತ್ತಿನ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉತ್ತೇಜಿಸಬೇಕು

(ಲೇಖಕರು ನಿವೃತ್ತ ಐ ಎ ಎಸ್ ಅಧಿಕಾರಿಯಾಗಿದ್ದು ಜಮ್ಮು ಮತ್ತು ಕಾಶ್ಮೀರದ ಸಾರ್ವಜನಿಕ ಪ್ರವಾಸೋದ್ಯಮದ ಮಾಜಿ ನಿರ್ದೇಶಕರೂ ಆಗಿದ್ದಾರೆ.)