ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 10: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಭಾಷಣದ ನೆಪದಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿ ದೇಶ ಸುರಕ್ಷಾ ಕಾನೂನು ಹೇರಿ ಜೈಲಿಗೆ ತಳ್ಳಿರುವ ಡಾ. ಕಫಿಲ್ ಖಾನ್ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ.
ಕಳೆದ ಜನವರಿ 29ಕ್ಕೆ ಮುಂಬೈಯಿಂದ ಬಂಧಿಸಿ ಉತ್ತರಪ್ರದೇಶ ಪೊಲೀಸರು ಅವರನ್ನು ಕರೆದೊಯ್ದಿದ್ದರು. ನಂತರ ಅಲಿಗಡ ಕೋರ್ಟು ಜಾಮೀನು ನೀಡಿತ್ತು. ತದನಂತರ ಇವರ ವಿರುದ್ಧ ಉತ್ತರಪ್ರದೇಶ ಪೊಲೀಸರು ದೇಶ ಸುರಕ್ಷಾ ಕಾನೂನು ಹೇರಿದ್ದರು.












