ಅಯೋಧ್ಯೆಯಲ್ಲಿ ಭೂಮಿ ಪೂಜೆ ಆರಂಭ

0
446

ಸನ್ಮಾರ್ಗ ವಾರ್ತೆ

ಲಕ್ನೊ,ಆ.5: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡುವ ಭೂಮಿ ಪೂಜೆ ಕಾರ್ಯಕ್ರಮವು ಆರಂಭವಾಗಿದೆ. ಶಿಲಾನ್ಯಾಸವೂ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಶಿಲಾನ್ಯಾಸಕ್ಕೆ 40 ಕಿಲೊಗ್ರಾಂ ತೂಕದ ಬೆಳ್ಳಿ ಇಟ್ಟಿಯನ್ನು ಇದಕ್ಕಾಗಿ ಉಪಯೋಗಿಸಲಾಗುವುದು. ರಾಮನಾಮ ಜಪದಲ್ಲಿ ವೇದ ಮಂತ್ರೋಚ್ಛಾರದ ವಾತಾವರಣದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ.

ಅಯೋಧ್ಯೆಯ ಸಾಕೇತ ಕಾಲೇಜು ಹೆಲಿಪ್ಯಾಡಿನಲ್ಲಿ ಬಂದಿಳಿದ ಪ್ರಧಾನಿ ಮೋದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನೇತೃತ್ವದಲ್ಲಿ ಸ್ವಾಗತಿಸಲಾಗಿದೆ. ಪ್ರಥಮವಾಗಿ ಪ್ರಧಾನಿ ಹನುಮಾನ್ ಗಡ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ಅಲ್ಲಿ ಬೆಳ್ಳಿ ಕಿರೀಟವನ್ನು ಸಮರ್ಪಿಸಿದರು. ನಂತರ ರಾಮಲಲ್ಲಾನನ್ನು ಪ್ರಾರ್ಥಿಸಿದರು. ನಂತರ ಭೂಮಿ ಪೂಜೆಗೆ ಬಂದರು. ಕಾರ್ಯಕ್ರಮ ಬೆಳಗ್ಗೆ 11:30ಕ್ಕೆ ಆರಂಭವಾಗಿದೆ.

ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಾಟೀಲ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್, ಮಂದಿರ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯಗೋಪಾಲ ದಾಸ್ ಕೂಡ ಪ್ರಧಾನ ವೇದಿಕೆಯಲ್ಲಿರಲಿದ್ದಾರೆ. ಕೇಂದ್ರ ಸೇನಾ ಪಡೆ ಭಾರೀ ಸುರಕ್ಷೆಯಲ್ಲಿ ಕಾರ್ಯಕ್ರಮ ಕೊರೋನ ಪ್ರತಿರೋಧ ನಿಬಂಧನೆಗಳನ್ನು ಪಾಲಿಸಿ ನಡೆಯುತ್ತಿದೆ ಎಂದು ವರದಿಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.