ಕೇರಳ: ಪ್ರವಾಹ ಪೀಡಿತ ಜಯದೇವನ್ ಗೆ ಹೊಸ ಮನೆ ಕಟ್ಟಿಸಿಕೊಟ್ಟ ಪೀಪಲ್ಸ್ ಫೌಂಡೇಶನ್

0
843

ಕೇರಳದ ಪ್ರವಾಹ ಬಾಧಿತರಿಗೆ ಪರಿಹಾರದ ಭಾಗವಾಗಿ ಪೀಪಲ್ಸ್ ಫೌಂಡೇಶನ್ ವತಿಯಿಂದ ಕಟ್ಟಿಸಿಕೊಡಲಾಗುವ 500 ಮನೆಗಳಲ್ಲಿ ಇದೀಗ ಪೂರ್ಣಗೊಂಡಿರುವ ಮೊದಲನೇಯ ಮನೆಯ ಕೀಲಿ ಕೈಯನ್ನು ಓಟ್ಟಿಸಂ ಕಾಯಿಲೆಯಿಂದ ಬಳಲುತ್ತಿರುವ ಜಯದೇವನ್ ಕುಟುಂಬಕ್ಕೆ ನೀಡಲಾಯಿತು. ಜಯದೇವನ ಅವರು ತನ್ನ ಮಗಳೊಂದಿಗೆ ಬದುಕುತ್ತಿದ್ದಾರೆ. ಕೇರಳದ ಟಿವಿ ಚಾನೆಲ್ ಆದ ಮೀಡಿಯಾ ವನ್ ಈ ಕುಟುಂಬದ ಸಂಕಟವನ್ನು ಬಿತ್ತರಿಸಿದಾಗ ಪೀಪಲ್ಸ್ ಫೌಂಡೇಶನ್ ಅದನ್ನು ಗಂಭೀರವಾಗಿ ಪರಿಗಣಿಸಿತು. ಮತ್ತು ತನ್ನ ಮನೆ ನಿರ್ಮಾಣದ ಮೊದಲನೆಯ ಮನೆಯನ್ನು ಜಯದೇವನ್ ಅವರಿಗೆ ನೀಡಬೇಕೆಂದುತೀರ್ಮಾನಿಸಿತು. ಕೆಲಸ ಆರಂಭಿಸಿ 68 ದಿನಗಳಲ್ಲಿ ಮನೆ ಪೂರ್ತಿಗೊಳಿಸಿ ಕೀ ಹಸ್ತಾಂತರಿಸಲಾಯಿತು. ಪೀಪಲ್ಸ್ ಫೌಂಡೇಶನ್ ನ ಚೇರ್ಮನ್ ಮತ್ತು ಜಮಾಅತೆ ಇಸ್ಲಾಮೀ ಕೇರಳದ ಉಪಾಧ್ಯಕ್ಷರಾದ ಪಿ. ಮುಜೀಬ್ ರಹ್ಮಾನ್ ಮತ್ತು ಸಾಲಿಡಾರಿಟಿ ಯೂಥ್ ಮೂವ್ ಮೆಂಟ್ ನ ಪ್ರಧಾನ ಕಾರ್ಯದರ್ಶಿ ಸಾದಿಕ್ ಉಳಿಯಿಲ್ ಅವರು ಕೀ ಹಸ್ತಾಂತರಿಸಿದರು.