ಹನೀಫ್ ಮಾಸ್ಟರ್‌ ರಿಗೆ ಬೀಳ್ಕೊಡುಗೆ ಸಮಾರಂಭ

0
395

ಸನ್ಮಾರ್ಗ ವಾರ್ತೆ

ಕುದ್ರೋಳಿ: ಸುಮಾರು 30 ವರ್ಷಗಳ ಕಾಲ ಕುದ್ರೋಳಿಯ ಅಲ್ ಮದ್ರಸತುಲ್ ಇಸ್ಲಾಮಿಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಹನೀಫ್ ಮಾಸ್ಟರ್ ‌ರವರು ನಿವೃತ್ತರಾಗುವ ಸಂದರ್ಭದಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಇತ್ತೀಚೆಗೆ ಇಸ್ಲಾಮಿಯಾ ಮದ್ರಸ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಇಸ್ಲಾಮಿಯ ಅಸೋಸಿಯೇಷನ್ ಕುದ್ರೋಳಿ ಇದರ ಅಧ್ಯಕ್ಷರಾದ ಜಾವೆದ್ ಅಖ್ತರ್ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷರಾದ ಕೆ ಎಂ ಅಶ್ರಫ್ ಜಂಟಿಯಾಗಿ ಶಾಲು ಹೊದಿಸಿ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಹನೀಫ್ ಮಾಸ್ಟರ್ ರವರು ತಮ್ಮ ಅನುಭವವನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಮದ್ರಸಾದ ಮುಖ್ಯ ಶಿಕ್ಷಕರಾದ ಯೂಸುಫ್ ಉಸ್ತಾದ್ ಅದೇ ರೀತಿ ಇಸ್ಲಾಮಿಯಾ ಅಸೋಸಿಯೇಷನ್‌ನ ಸದಸ್ಯರು ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.