ಕೊವ್ಯಾಕ್ಸಿನ್‍ಗೆ ಅನುಮತಿ ನಿರಾಕರಿಸಿದ ಅಮೆರಿಕ

0
387

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಭಾರತ್ ಬಯೊಟೆಕ್‍ನ ಕೊವ್ಯಾಕ್ಸಿನ್‍ನ ತುರ್ತು ಉಪಯೋಗಕ್ಕೆ ಅನುಮತಿ ನಿರಾಕರಿಸಿರುವ ಅಮೆರಿಕ, ಸದ್ಯ ತಡೆ ಹಿಡಿದಿದೆ. ಫುಡ್ ಆಂಡ್ ಡ್ರಗ್ ಅಡ್ಮಿಸ್ಟ್ರೇಶನ್ ಅನುಮತಿ ನಿರಾಕರಿಸಿದ್ದು ಇದರೊಂದಿಗೆ ಅಮೆರಿಕದಲ್ಲಿ ಕೊವಾಕ್ಸಿನ್ ವಿತರಿಸುವ ಅದರ ತಯಾರಕರ ಯೋಜನೆ ಇನ್ನೂ ತಡವಾಗಲಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.

ಕೊವ್ಯಾಕ್ಸಿನ್‍ ತಯಾರಕ ಭಾರತ್ ಬಯೊಟೆಕ್‍ನ ಅಮೆರಿಕದ ಪಾಲುದಾರ ಒಷುಗೆನ್ ಸರಕಾರಕ್ಕೆ ಅರ್ಜಿಸಲ್ಲಿಸಿತ್ತು. ಅರ್ಜಿಯನ್ನು ಸರಕಾರ ವಿಲೇವಾರಿ ಮಾಡಿದ್ದು ಹೆಚ್ಚಿನ ಮಾಹಿತಿಯನ್ನು ಕೇಳಿದೆ. ಕೊವ್ಯಾಕ್ಸಿನ್‍ ಪರೀಕ್ಷೆಯ ಕುರಿತು ಅಂಶಿಕ ವಿವರಗಳು ಮಾತ್ರ ಕಂಪೆನಿ ಅಮರಿಕ ಸರಕಾರಕ್ಕೆ ಕೊಟ್ಟಿತ್ತು. ಇದುವೇ ಅದಕ್ಕೆ ಅನುಮತಿ ಸಿಗದಿರಲು ಕಾರಣವೆನ್ನಲಾಗುತ್ತಿದೆ.

ಕೊವ್ಯಾಕ್ಸಿನ್‍ ಮೂರನೇ ಹಂತದ ಪರೀಕ್ಷೆಯ ಫಲಿತಾಂಶಗಳೇ ಭಾರತ್ ಬಯೊಟೆಕ್ ಮಟ್ಟಿಗೆ ನಿರ್ಣಾಯಕವಾಗಿದೆ. ಮೂರನೆ ಹಂತದಲ್ಲಿ ಯಶಸ್ಸು ಸಿಕ್ಕರೆ ವಿಶ್ವಾರೋಗ್ಯ ಸಂಘಟನೆಯಂತಹ ಏಜನ್ಸಿಗಳು ವ್ಯಾಕ್ಸಿನ್ ಗೆ ಅಂಗೀಕಾರ ನೀಡಲಿದೆ. ವ್ಯಾಕ್ಸಿನ್ ಪಾಸ್‍ಪೋರ್ಟ್‍ಗಾಗಿ ಕೊವಾಕ್ಸಿನ್ ಅನ್ನು ಪರಿಗಣಿಸಬೇಕಾದರೆ ವಿಶ್ವಾರೋಗ್ಯ ಸಂಘಟನೆಯ ಅನುಮತಿ ಅಗತ್ಯವಾಗಿದೆ.