ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಬದಲಾವಣೆ: 2015ರ ಜಿಡಿಪಿಯಲ್ಲಿ ಶೆ. 9.5 ಕೊರತೆ ಸಾಧ್ಯತೆ

0
368

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.9:ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಬದಲಾವಣೆ ತಂದಿದೆ. ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಕೊಡುವ ಸಾಲದ ಬಡ್ಡಿದರ ರೆಪೊ ದರ ಶೇ.4ರಂತೆ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಧ್ಯಮಗಳಿಗೆ ತಿಳಿಸಿದೆ. ಬ್ಯಾಂಕುಗಳ ಠೇವಣಿಗೆ ರಿಸರ್ವ್ ಬ್ಯಾಂಕ್ ಕೊಡುವ ಬಡ್ಡಿದರ ವಿವರ್ಸ್ ರೆಪೊ ದರ ಶೇ.3.35ರಂತೆ ಮುಂದುವರಿಯಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಹಣ ಸಾಲ ನೀತಿ ಸಮಿತಿ ಪುನರ್‌ರಚಿಸಿದ ಬಳಿಕ ಮೊದಲ ಹಣಸಾಲ ನೀತಿಯ ಅವಲೋಕನ ಸಭೆಯಲ್ಲಿ ಈ ತೀರ್ಮಾನವಾಗಿದೆ. ಮೂವರು ಹೊಸ ಸ್ವತಂತ್ರ ಸದಸ್ಯರು ಹೊಣೆ ವಹಿಸಿಕೊಂಡ ಬಳಿಕ ನಡೆದ ಮೊದಲ ಸಭೆಯಲ್ಲಿ ಎಲ್ಲ ಸದಸ್ಯರು ರೆಪೊದರ ಶೇ.4ರಂತೆ ಇರಬೇಕೆಂದು ಬೆಂಬಲ ನೀಡಿದ್ದಾರೆ.

2021ರ ಆರ್ಥಿಕ ವರ್ಷದಲ್ಲಿ ಜಿಡಿಪಿಯಲ್ಲಿ ಶೇ. 9.5ಕ್ಕಿಂತ ಕಡಿಮೆ ಬರುತ್ತದೆ ಎಂದು ಆರ್‌ಬಿಐ ಹೇಳುತ್ತಿದೆ. ಆರ್ಥಿಕ ವರ್ಷದ ನಾಲ್ಕನೆ ಹಂತದಲ್ಲಿ ಪರಿಸ್ಥಿತಿ ಸುಧಾರಣೆಗೊಳ್ಳುವ ಸಾಧ್ಯತೆ ಇದೆಯೆನ್ನಲಾಗಿದೆ. ಈಗಿನ ಪರಿಸ್ಥಿತಿಯು ದೇಶದ ಆರ್ಥಿಕ ಬೆಳವಣಿಗೆಗೆ ಬಾಧಕವಾಗಿದೆ. ಬ್ಯಾಂಕುಗಳ ದರ ಮಾರ್ಜಿನಿನಲ್ಲಿ ಸ್ಟಾಂಡಿಂಗ್ ಸೌಕರ್ಯ ಹಿಂದಿನಂತೆ ಮುಂದುವರಿಯಲಿದೆ. ಈಗ ಬ್ಯಾಂಕು ದರ ಶೇ. 4.2 ಆಗಿದೆ.

ಕೊರೋನ ಹರಡಿದ ಕಾರಣದಿಂದ ಆರ್ಥಿಕ ಸಮಸ್ಯೆ ಮುಂದುವರಿಯುತ್ತಿದೆ. ಇದನ್ನುಪರಿಗಣಿಸಿ ಬಡ್ಡಿದರ ಕಡಿಮೆ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚು ಹಣ ಲಭ್ಯತೆಯನ್ನು ಖಚಿತ ಪಡಿಸುವ ನಿಲುವು ಮುಂದುವರಿಯುತ್ತದೆ ಎಂದು ದಾಸ್ ಹೇಳಿದರು. ಆಗಸ್ಟ್ ನಡೆದ ಸಭೆಯಲ್ಲಿ ರೆಪೊ ದರ ಬದಲಾವಣೆ ಮಾಡಿರಲಿಲ್ಲ. 2020 ಫೆಬ್ರುವರಿಯಿಂದ ಇದುವರೆಗಿನ ದರದಲ್ಲಿ ಶೇ. 2.50ರಷ್ಟು ಕಡಿಮೆ ಮಾಡಲಾಗಿದೆ.

ಆಗಸ್ಟ್‌ನಲ್ಲಿ ಶೇ.6.69ರಷ್ಟು ಹಣದುಬ್ಬರ. ಕೊರೋನ ಹರಡುವಿಕೆಯಿಂದಾಗಿ ವಿತರಣಾ ಕ್ಷೇತ್ರ ಅಡಚಣೆ ಇರುವುದರಿಂದ ಮುಂದಿನ ತಿಂಗಳಲ್ಲಿ ಬೆಲೆಯೇರಿಕೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವೇಳೆ 2021ರ ಹಣದುಬ್ಬರ ದರ ಕಡಿಮೆಯಾಗಬಹುದೆಂದು ಶಕ್ತಿಕಾಂತ್ ದಾಸ್ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.