ಸನ್ಮಾರ್ಗ ವಾರ್ತೆ
ಭೋಪಾಲ,ನ.17: ಲವ್ ಜಿಹಾದ್ ವಿರುದ್ಧ ಶೀಘ್ರದಲ್ಲಿ ಕಾನೂನು ರಚಿಸಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಂ ಮಿಶ್ರ ಹೇಳಿದ್ದಾರೆ. ಲವ್ ಜಿಹಾದ್ ಎದುರಿಸಲು ಕಾನೂನನ್ನು ರಚಿಸುವುದಾಗಿ ಹೇಳಿದ ಅವರು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು. ಐದು ವರ್ಷ ಕಠಿಣ ಶಿಕ್ಷೆ ದೃಢಪಡಿಸಲಾಗುವುದು ಎಂದು ಹೇಳಿದರು.
ಜಾಮೀನು ರಹಿತ ಕೇಸು ದಾಖಲಿಸುವುದು, ಮುಖ್ಯ ಆರೋಪಿ, ಸಹಾಯಕನನ್ನು ಅಪರಾಧಿಯೆಂದು ಪರಿಗಣಿಸಲಾಗುವುದು. ಮದುವೆಗಾಗಿ ಮತಾಂತರ ಆಗುವ ಒಂದು ತಿಂಗಳ ಮೊದಲು ಜಿಲ್ಲಾಧಿಕಾರಿಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕೆಂದು ಮಿಶ್ರ ಹೇಳಿದರು.
ಲವ್ ಜಿಹಾದ್ ತಡೆಯಲು ಕಾನೂನು ರೂಪಿಸಲಾಗುವುದು ಎಂದು ಹರಿಯಾಣ, ಕರ್ನಾಟಕ ಸರಕಾರಗಳು ಈಗಾಗಲೇ ತಿಳಿಸಿವೆ. ಬಿಜೆಪಿಯ ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ರಾಜ್ಯಗಳು ಕಾನೂನು ರೂಪಿಸಲು ಸಿದ್ಧವಾಗಿದೆ.
ಲವ್ ಜಿಹಾದ್ ಒಂದು ಸಾಮಾಜಿಕ ಕೆಡುಕು ಆಗಿದೆ ಅದನ್ನು ನಿವಾರಿಸಲು ಕಾನೂನು ರೂಪಿಸುವುದು ಅಗತ್ಯವಿದೆ ಎಮದು ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು. ಕಾನೂನು ರಚನೆಗೆ ಸರಕಾರ ತಜ್ಞರ ಅಭಿಪ್ರಾಯವನ್ನು ಕೇಳಿದೆ ಎಂದು ಸಚಿವರು ಹೇಳಿದರು. ಮದುವೆಗಾಗಿ ಮತಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಲಾಹಾಬಾದ್ ಹೈಕೋರ್ಟು ಸೆಪ್ಟಂಬರಿನಲ್ಲಿ ಹೇಳಿತ್ತು.












