‘ಪ.ಬಂಗಾಳವನ್ನು ಗುಜರಾತ್ ಮಾಡುತ್ತೇವೆ’ ಎಂದ ಬಿಜೆಪಿ: ‘ಗಲಭೆಯ ಉದ್ದೇಶ ಇರಬಹುದು’ ಎಂದ ತೃಣಮೂಲ ಕಾಂಗ್ರೆಸ್

0
337

ಸನ್ಮಾರ್ಗ ವಾರ್ತೆ

ಕೊಲ್ಕತಾ,ನ.17: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ವಾಗ್ದಾಳಿ ತೀವ್ರಗೊಂಡಿದ್ದು ಪಶ್ಚಿಮ ಬಂಗಾಳವನ್ನು ಗುಜರಾತ್ ಮಾಡಲಾಗುವುದೆಂದು ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ. ಗಲಭೆಯನ್ನು ಉದ್ದೇಶಿಸಿ ಅವರು ಹೇಳಿಕೆ ನೀಡಿರಬಹುದೆಂದು ತೃಣಮೂಲ ಕಾಂಗ್ರೆಸ್ ನಾಯಕ ಫಿರ್ಹಾಸ್ ಹಕೀಂ ಪ್ರತ್ಯುತ್ತರ ನೀಡಿದ್ದಾರೆ.

ಬಿಮನ್ ಬೋಸ್, ಬುದ್ಧದೇವ ಭಟ್ಟಾಚಾರ್ಯ ಸಹಿತ ನಾಯಕರು ಜನರು ವೈದ್ಯರು, ಇಂಜಿನಿಯರ್ ಆಗುವುದರಿಂದ ತಡೆದು. ಬದಲಾಗಿ ಅವರು ಗುಜರಾತಿಗೆ ಕೆಲಸ ಮಾಡಲು ವಲಸೆ ಹೋಗುವವರನ್ನಾಗಿ ಮಾಡಿದರು. ಇಲ್ಲಿ ಬಿಜೆಪಿ ಸರಕಾರ ಬಂದರೆ ಪ. ಬಂಗಾಳವನ್ನು ಗುಜರಾತ್ ಮಾಡುತ್ತೇವೆ. ಪ.ಬಂಗಾಳವನ್ನು ಗುಜರಾತ್ ಮಾಡಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸುತ್ತಾರೆ. ಹೌದು ನಾವು ಪಶ್ಚಿಮಬಂಗಾಳವನ್ನು ಗುಜರಾತ್ ಮಾಡುತ್ತೇವೆ. ನಮ್ಮ ಮಕ್ಕಳು ಇನ್ನು ಕೆಲಸ ಹುಡುಕಿ ಗುಜರಾತ್‍ಗೆ ಹೋಗಬೇಕಾಗಿಲ್ಲ” ಎಂದು ಬಿಜೆಪಿ ನಾಯಕ ದಿಲೀಪ್ ಘೋಷ್ ಹೇಳಿದರು.

ಇದಕ್ಕೆ ಉತ್ತರವಾಗಿ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಸಚಿವರಾದ ಫಿರ್ಹಾಸ್ ಹಕೀಂ ಹೀಗೆ ಹೇಳಿದರು” 2002ರಲ್ಲಿ ಗುಜರಾತ್ ಗಲಭೆಯಲ್ಲಿ 2,000 ಮಂದಿ ಮೃತಪಟ್ಟಿದ್ದಾರೆ. ನೀವು ಬಂಗಾಳವನ್ನು ಗುಜರಾತ್ ಮಾಡುತ್ತೇವೆ ಎನ್ನುವಾಗ ಇಲ್ಲಿ ಇರುವವರಲ್ಲಿ ಗಲಭೆ ಭೂಮಿಯನ್ನಾಗಿಸುವರೆಂಬ ಭಯವಿದೆ. ನಮಗೆ ಪ.ಬಂಗಾಳವನ್ನು ಗುಜರಾತ್ ಮಾಡುವುದು ಬೇಡ. ಇದು ರವೀಂದ್ರನಾಥ್ ಟ್ಯಾಗೋರ್, ನಸ್ರುಲ್‍ರ ನಾಡು. ಪ.ಬಂಗಾಳದ ಸಾಂಸ್ಕೃತಿ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕೆ, ಅಥವಾ ಗುಜರಾತ್ ಗಲಭೆ ರಾಜಕೀಯ ಭೂಮಿಯಂತೆ ಮಾಡಬೇಕೆ ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ”. ಗುಜರಾತಿನಲ್ಲಿ ಉನ್ನತಿ ಪಡೆದದ್ದು ಅದಾನಿ ಮತ್ತು ಅಂಬಾನಿ ಎಂದು ಫಿರ್‍ಹಾಸ್ ಹೇಳಿದರು.