ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‍ ಗೆ ಜೀವಾವಧಿ ಶಿಕ್ಷೆ

0
2121

ಅಹ್ಮದಾಬಾದ್, ಜೂ. 20 ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್‍ ಭಟ್‍ ರಿಗೆ ಜಾಮನಗರ ನ್ಯಾಯಾಲಯ ಜೀವಾವಧಿ ಜೈಲುಶಿಕ್ಷೆ ವಿಧಿಸಿ ತಿರ್ಪು ನೀಡಿದೆ. 1990ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೊಬ್ಬನ ಸಾವು ಸಂಭವಿಸಿದ ಪ್ರಕರಣದಲ್ಲಿ ಭಟ್‍ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಭಟ್ ಮತ್ತು ಅವರ ಸಂಗಡಿಗರು ಪೊಲೀಸ್ ಕಸ್ಟಡಿಯಲ್ಲಿ ಹೊಡೆದಿದ್ದಾರೆ ಎಂದು ಆರೋಪ ಹೊರಿಸಲಾಗಿತ್ತು.

ಈ ಪ್ರಕರಣದಲ್ಲಿ ಸಂಜೀವ್ ಭಟ್ ಮತ್ತು ಇತರ ಪೊಲೀಸರ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು. ಆದರೆ ಗುಜರಾತ್ ಸರಕಾರ ಮೊಕದ್ದಮೆ ನಡೆಸಲು ಅನುಮತಿ ನೀಡಿರಲಿಲ್ಲ. 2011ರಲ್ಲಿ ಗುಜರಾತ್ ಸರಕಾರ ಭಟ್ ವಿರುದ್ಧ ಪ್ರಕರಣ ಚಲಾಯಿಸಲು ಅನುಮತಿ ನೀಡಿತ್ತು.