ಕೊಲ್ಲ, ಜು.1: ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಆಕೆಯ ಮನೆಗೆ ನುಗ್ಗಿ ಯುವಕನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಶಾಸ್ತಂಕೋಟ ಎಂಬಲ್ಲಿ ನಡೆದಿದೆ. ಶಾಸ್ತಂಕೋಟೆಯ ಅನಂತು ಎಂಬಾತ ಯುವತಿಗೆ ಇರಿದ ವ್ಯಕ್ತಿ. ಈತ ಖಾಸಗಿ ಬಸ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಗಾಯಾಳು ಯುವತಿಯನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಯ ಮನೆಯ ಮಾಡಿನ ಹೆಂಚು ತೆಗೆದು ಅನಂತು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.












