2000 ರೂ. ದಾಟಿದ ವಾಣಿಜ್ಯ ಅಡುಗೆ ಅನಿಲದ ಬೆಲೆ: ಸಾಮಾನ್ಯ ವರ್ತಕರಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವ ಸರಕಾರ

0
604

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳದ ಬೆನ್ನಿಗೆ ಅಡುಗೆ ಅನಿಲಕ್ಕೆ ಭಾರೀ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಗೆ 266 ರೂ. ಹೆಚ್ಚಿಸಲಾಗಿದ್ದು, ಸಾಮಾನ್ಯ ವರ್ತಕರಿಗೆ ಗಾಯದ ಮೇಲೆ ಸರಕಾರ ಬರೆ ಎಳೆಯುತ್ತಿದೆ. ದಿಲ್ಲಿಯಲ್ಲಿ ಸಿಲೆಂಡರ್ ಬೆಲೆ 2000 ರೂಪಾಯಿ ದಾಟಿದೆ. ಚೆನ್ನೈಯಲ್ಲಿ 2,133 ರೂಪಾಯಿ ಆಗಿದೆ. ಆದರೆ ಮನೆ ಬಳಕೆಯ ಅಡುಗೆ ಅನಿಲಕ್ಕೆ ರೇಟು ಹೆಚ್ಚಿಸಿಲ್ಲ ಎನ್ನೊದು ಸದ್ಯ ಸಮಾಧಾನ ತಂದಿದೆ.

ದೇಶದಲ್ಲಿ ಇಂದು ಇಂಧನ ಬೆಲೆ ಹೆಚ್ಚಿಸಲಾಗಿದ್ದು ಪೆಟ್ರೋಲ್, ಡೀಸೆಲ್‍ಗೆ ತಲಾ 48 ಪೈಸೆ ಹೆಚ್ಚಳವಾಗಿದೆ. ಈ ವರ್ಷ ಜನವರಿ ಒಂದರಿಂದ ಸೋಮವಾರ 11ನೇ ತಿಂಗಳ ಆರಂಭದಲ್ಲಿ ಪೆಟ್ರೋಲ್ ಗೆ ಒಂದ ಲೀಟರ್ ಗೆ 25.83 ರೂಪಾಯಿ ಮತ್ತು ಡೀಸೆಲ್‍ಗೆ 25.66 ರೂಪಾಯಿ ಹೆಚ್ಚಳವಾಗಿದೆ. ಜನವರಿ ಒಂದಕ್ಕೆ ಒಂದು ಲೀಟರ್ ಪೆಟ್ರೋಲ್‍ಗೆ 85.72 ರೂ. ಆಗಿತ್ತು. ಡೀಸೆಲ್ ಬೆಲೆ 79.65 ರೂಪಾಯಿ ಆಗಿತ್ತು.