ಎಂ.ಸಿ. ಯಹ್ಯಾ ನಿಧನ

0
215

ಸನ್ಮಾರ್ಗ ವಾರ್ತೆ

ಮಂಗಳೂರು: ಇಲ್ಲಿನ ಸ್ಟೇಟ್  ಬ್ಯಾಂಕ್ ಸಮೀಪದ ಹ್ಯಾಮಿಲ್ಟನ್ ಸರ್ಕಲ್ ಬಳಿಯ ಕಾಂಪ್ಲೆಕ್ಸ್ ನಲ್ಲಿ ವಾಸವಾಗಿದ್ದ ಎಂ.ಸಿ.ಯಹ್ಯಾ ಜ. 8.  ಭಾನುವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕಾಸರಗೋಡು ಮೊಗ್ರಾಲ್ ನಿವಾಸಿಯಾಗಿದ್ದ ಮೃತರು ಕೆಲ ಕಾಲದಿಂದ ಅನಾರೋಗ್ಯದಿಂದಿದ್ದರು. ಮೃತರು ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಹ್ಯಾಮಿಲ್ಟನ್ ಕಾಂಪ್ಲೆಕ್ಸ್, ಮತ್ತು ಸೀ ವ್ಯೂವ್ ಟೂರಿಸ್ಟ್ ಹೋಮ್‌ನ ಪಾಲುದಾರರಾಗಿದ್ದರು. ಅವರು ಜನಾನುರಾಗಿಯಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.