ಸನ್ಮಾರ್ಗ ವಾರ್ತೆ
ನೋಬೆಲ್ ಶಾಂತಿ ಪ್ರಶಸ್ತಿಗಾಗಿ ಹಂಬಲಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಸ್ವತಃ ತಮಗೆ ಲಭಿಸಿದ ಗೌರವವನ್ನು ಟ್ರಂಪ್ ಗೆ ದಾನ ಮಾಡಿದ್ದಾರೆ. ಈ ಪ್ರಶಸ್ತಿ ವರ್ಗಾವಣೆ ಬಗ್ಗೆ ಈಗ ನೊಬೆಲ್ ಸಮಿತಿ ಕೊನೆಗೂ ಮೌನ ಮುರಿದಿದೆ.
ನೋಬೆಲ್ ಪ್ರಶಸ್ತಿಯನ್ನು ಮತ್ತೊಬ್ಬರಿಗೆ ಕೊಟ್ಟರೂ ಅದರ ಗೌರವ ಅಧಿಕೃತವಾಗಿ ಅವರಿಗೆ ಸಿಗುವುದಿಲ್ಲ ಎಂದು ನೊಬೆಲ್ ಸಮಿತಿ ಹೇಳಿದೆ.
ಓಸ್ಲೋದಿಂದ ಬಿಡುಗಡೆಯಾದ ಹೇಳಿಕೆಯಲ್ಲಿ ನೊಬೆಲ್ ಸಮಿತಿಯು, ಭೌತಿಕ ಪದಕ, ಡಿಪ್ಲೊಮಾ ಮತ್ತು ಬಹುಮಾನದ ಹಣವನ್ನು ದಾನ ಮಾಡಬಹುದು, ಮಾರಾಟ ಮಾಡಬಹುದು ಅಥವಾ ಬೇರೆ ರೀತಿಯಲ್ಲಿ ಹಸ್ತಾಂತರಿಸಬಹುದು. ಆದರೆ ಅದರ ಗೌರವ ಮೂಲ ವಿಜೇತರಿಗೇ ಇರುತ್ತದೆ ಹೊರತು ಪಡೆದವರಿಗೆ ಹಸ್ತಾಂತರ ಆಗುವುದಿಲ್ಲ ಎಂದು ಹೇಳಿದೆ.
ಪದಕ, ಡಿಪ್ಲೊಮಾ ಅಥವಾ ಬಹುಮಾನದ ಹಣವನ್ನು ಸಮಿತಿ ಒಮ್ಮೆ ವಿಜೇತರಿಗೆ ಹಸ್ತಾಂತರಿಸಿದ ಬಳಿಕ ಅದನ್ನು ಅವರ ಏನು ಮಾಡುತ್ತಾರೆ ಎನ್ನುವುದು ಅವರ ವೈಯಕ್ತಿಕ. ಆದರೆ ತಮ್ಮ ದಾಖಲೆಗಳಲ್ಲಿ ಬಹುಮಾನವನ್ನು ಪಡೆದವರೇ ಮೂಲ ಪ್ರಶಸ್ತಿ ವಿಜೇತರು ಎಂದು ದಾಖಲಾಗಿರುತ್ತದೆ. ಪದಕ ಅಥವಾ ಡಿಪ್ಲೊಮಾ ನಂತರ ಬೇರೊಬ್ಬರ ಸ್ವಾಧೀನಕ್ಕೆ ಬಂದರೂ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು ಎಂಬುದನ್ನು ಅದು ಬದಲಾಯಿಸುವುದಿಲ್ಲ ಎಂದಿದೆ.
ಶಾಂತಿ ಪ್ರಶಸ್ತಿ ಪುರಸ್ಕೃತರು ಅಥವಾ ಅವರು ತೊಡಗಿಸಿಕೊಂಡಿರುವ ರಾಜಕೀಯ ಪ್ರಕ್ರಿಯೆಗಳ ಬಗ್ಗೆ ಯಾವುದೇ ಕಾಮೆಂಟ್ ಮಾಡುವುದಿಲ್ಲ. ವಿಜೇತರು ತಮಗೆ ಸಿಕ್ಕ ಬಹುಮಾನದ ಹಣವನ್ನು ಏನು ಮಾಡುತ್ತಾರೆ ಎಂಬುದರ ಮೇಲೆ ಯಾವುದೇ ನಮ್ಮ ಯಾವುದೇ ನಿರ್ಬಂಧಗಳಿಲ್ಲ. ನೊಬೆಲ್ ಪ್ರಶಸ್ತಿ ವಿಜೇತರು ತಮ್ಮ ಪದಕಗಳನ್ನು ಮಾರಾಟ ಮಾಡಿದ ಅಥವಾ ದಾನ ಮಾಡಿದ ಹಲವಾರು ನಿದರ್ಶನಗಳು ಹಿಂದೆ ಇದ್ದವು ಎಂದು ನೊಬೆಲ್ ಸಂಸ್ಥೆ ಹೇಳಿದೆ.
- ನ್ಯೂಸ್ ಬ್ಯೂರೋ, ಸನ್ಮಾರ್ಗ ನ್ಯೂಸ್












