ಸನ್ಮಾರ್ಗ ವಾರ್ತೆ
ಲವ್ ಜಿಹಾದ್ ಎಂದು ಆರೋಪಿಸಿ ಯುವಕನನ್ನು ಥಳಿಸಿದ ಮತ್ತು ಯುವತಿಯನ್ನು ಸತಾಯಿಸಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಯುವಕನನ್ನು ತನ್ನ ಗೆಳೆಯ ಎಂದು ಯುವತಿ ಹೇಳಿದರೂ ಕೇಳದೆ ಅವರು ಆ ಯುವಕನಿಗೆ ಥಳಿಸಿದ್ದಾರೆ ಮತ್ತು ವಿಚಾರಣೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈತನೊಂದಿಗೆ ನಿನ್ನ ಸಂಬಂಧ ಏನು ಎಂದು ಥಳಿಸುತ್ತಿರುವ ಗುಂಪಿನ ನಾಯಕ ಯುವತಿಯಲ್ಲಿ ಪ್ರಶ್ನಿಸುವುದು ವಿಡಿಯೋದಲ್ಲಿದೆ.
ತನ್ನ ತಂದೆ ಮತ್ತು ತಾಯಿಯನ್ನು ಸ್ಥಳಕ್ಕೆ ಕರೆಸುವುದಕ್ಕೆ ಅವರು ಬಲವಂತ ಪಡಿಸಿದರು ಎಂದು ಯುವತಿ ಆ ಬಳಿಕ ಹೇಳಿದ್ದಾರೆ. ಈ ಇಬ್ಬರನ್ನೂ ಈ ಗುಂಪು ಪೊಲೀಸರಿಗೆ ಹಸ್ತಾಂತರಿಸಿದೆ. ಘಟನೆಯ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ












