ತೆಲಂಗಾಣ: ಮದುವೆ ಮಂಟಪದಿಂದ ಓಡಿ ಹೋದ ವರ, ವಧುವಿನ ಹೆತ್ತವರ ಸಮಯ ಪ್ರಜ್ಞೆಯಿಂದ ನೆರವೇರಿದ ವಿವಾಹ

0
1250

ಕರೀಂನಗರ್: ಮದುವೆಯ ಒಂದು ಗಂಟೆಗೂ ಮುನ್ನ ಮದುವೆ ಮಂಟಪದಿಂದ ಓಡಿದ ವರನಿಂದಾಗಿ ವಧು ಹಾಗೂ ಆಕೆಯ ಹೆತ್ತವರು ಸಂಕಷ್ಟಕ್ಕೆ ಸಿಲುಕಿದ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಿನ್ನೆ(ಡಿ.29) ನಡೆಯಿತು.

ದಿ ಹನ್ಸ್ ಇಂಡಿಯಾ ವರದಿಯ ಪ್ರಕಾರ ವರ ಶ್ರೀನಿವಾಸ್ ಮದುವೆ ಮಂಟಪದಿಂದ ಒಂದು ಗಂಟೆಗೂ ಮುನ್ನ ಓಡಿ ಹೋಗಿರುವುದು ವಧುವಿನ ಹೆತ್ತವರಿಗೆ ತಿಳಿದು ಬಂತು.

ಈ ಸನ್ನಿವೇಶದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದ ರಾಜಲಿಂಗ ಹಾಗೂ ಭೂಲಕ್ಷ್ಮಿಯವರು ಸ್ಥಳದಲ್ಲಿ ಉಪಸ್ಥಿತರಿದ್ದ ರಮೇಶ್ ಎಂಬುವವರಲ್ಲಿ ತಮ್ಮ ಮಗಳನ್ನು ವರಿಸುವಂತೆ ಕೇಳಿಕೊಂಡರು. ರಮೇಶ್ ವಿವಾಹವಾಗಲು ಸಮ್ಮತಿಸಿದುದರಿಂದ ನಿಗದಿತ ಮುಹೂರ್ತದಲ್ಲಿ ವಿವಾಹವು ನೆರವೇರಿತು ಎಂಬುದಾಗಿ ತಿಳಿದು ಬಂದಿದೆ.