ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಮುಂದಿನ ಪ್ರಧಾನಿ ಹಾಗೂ ಕಲಿಯುಗದ ಅವತಾರ’ ಎಂದು ಪ್ರತಿನಿಧೀಕರಿಸಿದ ವಿವಾದಾತ್ಮಕ ಪೋಸ್ಟರ್ ಗಳನ್ನು ಮುನ್ಸಿಪಲ್ ಕಾರ್ಪೊರೇಶನಿಂದ ನೋಟಿಸ್ ಜಾರಿಗೊಂಡ ಬಳಿಕ ಆಗ್ರಾದ ಸಾರ್ವಜನಿಕ ಪ್ರದೇಶಗಳಿಂದ ತೆರವುಗೊಳಿಸಿದ ಘಟನೆಯು ನಡೆದಿದೆ.
ಫೈಜಿಯಾಬಾದನ್ನು ಅಯೋಧ್ಯೆ ಎಂದು ನಾಮಕರಣ ಮಾಡಿದುದರ ಕುರಿತು ಧನ್ಯವಾದ ಸಲ್ಲಿಸುವ ಈ ಪೋಸ್ಟರ್ ಗಳಲ್ಲಿ ಶ್ರೀ ರಾಮ ಹಾಗೂ ರಾಜಕೀಯ ಪ್ರವೇಶಿಸಿದ ಸಾಧು ಎಂಬ ಚಿತ್ರಗಳನ್ನು ಬಿತ್ತರಿಸಲಾಗಿದೆ.ಈ ಪೋಸ್ಟರ್ ಗಳನ್ನು ನವ ನಿರ್ಮಾಣ ಸೇನಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಿತ್ತು.
ಇದಲ್ಲದೇ ಉತ್ತರ ಪ್ರದೇಶದ ನವ ನಿರ್ಮಾಣ ಸೇನಾ “ಯೋಗಿ ಫಾರ್ ಪಿಎಂ” ಎಂಬ ಬೃಹತ್ ಪೋಸ್ಟರ್ ಅಭಿಯಾನವನ್ನು ಕೈಗೊಂಡಿರುವುದು ರಾಜಕೀಯ ರಂಗದಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತ್ತು. ಆಗ್ರಾ ಮೇಯರ್ ನವೀನ್ ಜೈನ್ ನಗರದ ವಿವಿಧ ಪ್ರದೇಶಗಳಲ್ಲಿ ಬಿತ್ತರಿಸಲಾದ ಪೋಸ್ಟರ್ ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು.












