ಮಹಾರಾಷ್ಟ್ರ: ವಕ್ಫ್ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದ ಸಾವಿರಾರು ಮಹಿಳೆಯರು

0
310

ಸನ್ಮಾರ್ಗ ವಾರ್ತೆ

ವಕ್ಫ್ ಕಾಯ್ದೆಯ ವಿರುದ್ಧ ಮಹಾರಾಷ್ಟ್ರದ ಜಲ್ಗಾವ್ ನಲ್ಲಿ ಸಾವಿರಾರು ಮಹಿಳೆಯರು ಸೇರಿ ಪ್ರತಿಭಟಿಸಿದ್ದಾರೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಕರೆಯಂತೆ ಈ ಪ್ರತಿಭಟನೆ ನಡೆದಿದ್ದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.

ವಕ್ಫ್ ಕಾಯ್ದೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಅದರಲ್ಲಿರುವ ಮಾರಕ ನಿಯಮಗಳನ್ನು ಎತ್ತಿ ಹೇಳಿ ವಕ್ಫ್ ಆಸ್ತಿಗೆ ಅದರಿಂದ ಆಗುವ ಹಾನಿಯ ಬಗ್ಗೆ ವಿವರಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಸೇರಿದಂತೆ ಮಹಾರಾಷ್ಟ್ರದ ಹಲವು ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿತ್ತು. ಸಭೆಯನ್ನು ಉದ್ದೇಶಿಸಿ ಉತ್ತರ ಮಹಾರಾಷ್ಟ್ರದ ಜಿಐಒ ನ ಪ್ರಧಾನ ಕಾರ್ಯದರ್ಶಿ ಅಮ್ಮಾರ ತಸ್ಲೀಮ್, ಡಾಕ್ಟರ್ ಫರಾ, ನಿಲೋಫರ್ ಇಕ್ಬಾಲ್ ಮುಂತಾದವರು ಮಾತಾಡಿದರು. ಕೊನೆಯಲ್ಲಿ ಸ್ಥಳೀಯ ಅಪರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ 11 ಅಂಶಗಳ ಮನವಿಯನ್ನು ಪ್ರತಿಭಟನಾಕಾರರು ಸಲ್ಲಿಸಿದರು.