ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

0
162

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಹೊಣೆ ವಹಿಸಿಕೊಂಡರು. ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪದಗ್ರಹಣ ಸಮಾರಂಭ ನಡೆಯಿತು. ಈ ವೇಳೆ ಹಿರಿಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕಾರ್ಯಕಾರಿಣಿ ಸದಸ್ಯರು, ಎಐಸಿಸಿ ಪದಾಧಿಕಾರಿಗಳೂ ಪಿಸಿಸಿ ಅಧ್ಯಕ್ಷರು ಮುಂತಾದವರು ಇದ್ದರು.

ರಾಜ್‍ಘಾಟ್‍ನಲ್ಲಿ ಪುಷ್ಪಾರ್ಚನೆ ಮಾಡಿದ ನಂತರ ಖರ್ಗೆ ಸಮಾರಂಭಕ್ಕೆ ತೆರಳಿದರು. ಎಐಸಿಸಿ ಮಂದಿರ ವರಾಂಡದ ವಿಶೇಷ ವೇದಿಕೆಯಲ್ಲಿ ಕೇಂದ್ರ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ಹೊಸ ಅಧ್ಯಕ್ಷರು ಆಯ್ಕೆಯ ಪ್ರಮಾಣ ಪತ್ರ ಹಸ್ತಾಂತರಿಸಿದರು. ನಿರ್ಗಮನ ಅಧ್ಯಕ್ಷೆ ಸೋನಿಯಾ ಗಾಂಧಿ, ಖರ್ಗೆಯವರನ್ನು ಅಧ್ಯಕ್ಷರ ಕುರ್ಚಿಯೆಡೆಗೆ ಕರೆದುಕೊಂಡು ಹೋಗಿ ಕೂರಿಸಿದರು.

ನೆಹರೂ ಕುಟುಂಬದ ಹೊರಗಿನಿಂದ ಕಾಂಗ್ರೆಸ್ ಅಧ್ಯಕ್ಷತೆಗೆ 24 ವರ್ಷದ ಬಳಿಕ ಒಬ್ಬರ ಆಯ್ಕೆಯಾಗಿದ್ದಾರೆ. 1988ರಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿ ಸ್ಥಾನವಹಿಸಿಕೊಂಡಾಗ ಅಂದು ಕಾಂಗ್ರೆಸ್‍ನ ಅವಸ್ಥೆ ಹೀನಾಯವಾಗಿತ್ತು‌.

ಕಾರ್ಯಕಾರಿ ಸಮಿತಿ ಚುನಾವಣೆಗಳು, ಎಐಸಿಸಿ ಪ್ಲೀನರಿ ಮತ್ತು ಹಿಮಾಚಲ-ಗುಜರಾತ್ ವಿಧಾನಸಭಾ ಚುನಾವಣೆಗಳು ಖರ್ಗೆಯವರ ಮುಂದಿರುವ ದೊಡ್ಡ ಸವಾಲುಗಳಾಗಿವೆ. ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರು ದೀಪಾವಳಿ ಮತ್ತು ನೂತನ ಅಧ್ಯಕ್ಷರ ಪದಗ್ರಹಣವನ್ನು ಆಚರಿಸಲು ಮೂರು ದಿನಗಳ ಕಾಲ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಹಿರಿಯ ಮುಖಂಡರಾದ ರಮೇಶ್ ಚೆನ್ನಿತ್ತಲ, ಪಿ.ಸಿ.ವಿಷ್ಣು ನಾಥ್, ವಿ.ಪಿ. ಸಜೀಂದ್ರನ್, ಎಂ.ಎಂ. ನಾಸೀರ್, ಜೇಸನ್ ಜೋಸೆಫ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದರು.